ಬೆಂಗಳೂರು : ಡಿಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ಹತ್ತಿರ ಆಗುತ್ತಿದ್ದಾರೆ ಎಂಬ ವಿಚಾರವಾಗಿ, ನಾನು ಇನ್ನೂ ಅಮಿತ್ ಶಾ ಅವರನ್ನೇ ಭೇಟಿ ಮಾಡಿಲ್ಲ. ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ ಹಿಂದೂ ಆಗಿಯೆ ಸಾಯುತ್ತೇನೆ. ಜೈಲಿನಲ್ಲಿ ಇದ್ದಾಗ ಸಿಖ್ ಧರ್ಮದ ಕುರಿತು ಕಲಿತಿದ್ದೇನೆ. ದರ್ಗಾಕ್ಕೂ ಹೋಗುತ್ತೇನೆ. ಚರ್ಚ್ ಗೂ ಕೂಡ ಹೋಗುತ್ತೇನೆ. ಅವರೆಲ್ಲ ಆಶೀರ್ವಾದ ಮಾಡುತ್ತಾರೆ. ಎಲ್ಲಾ ಸಮುದಾಯದವರು ನನ್ನನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಕುಂಭಮೇಳ ಉತ್ತಮವಾಗಿ ಸಂಘಟಿಸಿದ್ದರು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಜೊತೆ ನಾನು ಯಾವುದೇ ಸಂಪರ್ಕ ಇಟ್ಟುಕೊಂಡಿಲ್ಲ. ಪಾಪ ನಾನು ಇನ್ನೂ ಅಮಿತ್ ಶಾ ಅವರನ್ನು ಭೇಟಿನೆ ಮಾಡಿಲ್ಲ ಆಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿಗೆ ಹತ್ತಿರ ಎಂದು ವೈರಲ್ ಆಗುತ್ತಿದೆ ಎಂದು ಅವರು ತಿಳಿಸಿದರು.
ಭಗವಂತ ಬಂದರು ಬೆಂಗಳೂರು ಸರಿಪಡಿಸಲು ಆಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ನಾಯಕರು ಡಿಸಿಎಂ ಡಿಕೆ ಶಿವಕುಮಾರ್ ರಾಜೀನಾಮೆ ಒತ್ತಾಯಿಸಿದ್ದರು. ಇದೀಗ ಬಿಜೆಪಿ ನಾಯಕರು ಒತ್ತಾಯಕ್ಕೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು ನನ್ನ ರಾಜೀನಾಮೆಗೆ ಬಿಜೆಪಿ ನಾಯಕರು ಕಾಯಲಿ ಎಂದು ಸೈಲೆಂಟ್ ಆಗಿ ತಿರುಗೇಟು ನೀಡಿದರು.
ಡಿಕೆ ಶಿವಕುಮಾರ್ ಒಬ್ಬ ಉದ್ಯಮಿ ಎಂಬ ಮೋಹನ್ ದಾಸ್ ಟೀಕೆ ಮಾಡಿರುವ ವಿಚಾರವಾಗಿ ಮೋಹನ್ ದಾಸ್ ಹಿರಿಯರು ದೊಡ್ಡ ಮನುಷ್ಯ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಮೋಹನ್ ದಾಸ್ ಪೈ ಕೂಡ ರಾಜಕೀಯಕ್ಕೆ ಬರಲಿ. ಸಲಹೆ ಕೊಡುವವರು ಸಾಕಷ್ಟು ಜನ ಇದ್ದಾರೆ. ಮೋಹನ್ ದಾಸ್ ಪೈ ಚುನಾವಣೆಗೆ ನಿಲ್ಲಲಿ ಏನು ಎಂದು ಗೊತ್ತಾಗುತ್ತದೆ. ಒಳ್ಳೆಯ ಕೆಲಸ ಮಾಡುವಾಗ ವಿರೋಧ ಇದ್ದೇ ಇರುತ್ತದೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು