ಸುಡಾನ್ : ಸುಡಾನ್’ನಲ್ಲಿ ಮಂಗಳವಾರ ವಿಮಾನ ಅಪಘಾತ ಸಂಭವಿಸಿದ್ದು, ವಾಡಿ ಸೈದ್ನಾ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಕನಿಷ್ಠ 46 ಸೇನಾ ಸಿಬ್ಬಂದಿ ಮತ್ತು ಹಲವಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಪ್ರಸ್ತುತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಸುಡಾನ್ ಮೇಲೆ ಹಿಡಿತ ಸಾಧಿಸಲು ಸೇನೆ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (RSF) ನಡುವೆ ನಡೆಯುತ್ತಿರುವ ಅಂತರ್ಯುದ್ಧವು ಇತ್ತೀಚೆಗೆ ತೀವ್ರಗೊಂಡಿದೆ. ಡಾರ್ಫುರ್ನ ಪಶ್ಚಿಮ ಭಾಗವನ್ನು ನಿಯಂತ್ರಿಸುವ RSF ಇತ್ತೀಚೆಗೆ ನ್ಯಾಲಾ ಪ್ರದೇಶದಲ್ಲಿ ಮಿಲಿಟರಿ ವಿಮಾನವನ್ನು ಹೊಡೆದುರುಳಿಸಿದೆ ಎಂದು ಹೇಳಿದೆ. ಆದ್ರೆ ಈ ಘರ್ಷಣೆಗಳು ಪ್ರಸ್ತುತ ಅಪಾಯಕ್ಕೆ ಸಂಬಂಧಿಸಿವೆಯೇ? ಈ ಬಗ್ಗೆ ತನಿಖೆ ನಡೆಯುತ್ತಿದೆ.
SECURITY UPDATE: A Sudanese military Antonov aircraft crashed near Wadi Seidna air base in Omdurman, Sudan, on Tuesday, reportedly killing all military officers aboard and at least five civilians on the ground. Military sources attribute the crash to technical malfunction.
The… pic.twitter.com/wVldFMEnqD
— The Risk Intelligence Group (@riskintelgroup) February 25, 2025
BREAKING : ಬಿಹಾರ ಸಚಿವ ಸಂಪುಟ ವಿಸ್ತರಣೆ ; ಬಿಜೆಪಿಯ 7 ನೂತನ ‘ಸಚಿವರು’ ಪ್ರಮಾಣ ವಚನ ಸ್ವೀಕಾರ |VIDEO
ನಾನು ಹಿಂದೂವಾಗಿ ಹುಟ್ಟಿದ್ದು, ಹಿಂದೂವಾಗಿಯೇ ಸಾಯುತ್ತೇನೆ: ಡಿಸಿಎಂ ಡಿಕೆ ಶಿವಕುಮಾರ್
ಈತ ಭವಿಷ್ಯಕ್ಕೆ ಪ್ರಯಾಣಿಸಿ ಬಂದಿದ್ದನಂತೆ ; ಈ ವರ್ಷ ‘5 ನೈಸರ್ಗಿಕ ವಿಪತ್ತು’ಗಳಿಂದ ಜಗತ್ತು ನಾಶವಾಗುತ್ತಂತೆ!