ಮೈಸೂರು : ಕಳೆದ ಕೆಲವು ದಿನಗಳಷ್ಟೇ ಹಿಂದೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳಿಂದ ಅಗ್ನಿ ಅವಘಡ ಸಂಭವಿಸಿತ್ತು. ಇದೀಗ ಮೈಸೂರಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದ್ದು ಆಕಸ್ಮಿಕ ಬೆಂಕಿಯಿಂದಾಗಿ ಹತ್ತರಿಂದ ಹನ್ನೆರಡು ಬಾಯ್ಲರ್ ಗಳು ಹೊತ್ತಿ ಉರಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೌದು ಮೈಸೂರಲ್ಲಿ ಕೆಮಿಕಲ್ ಬಾಯ್ಲರ್ ವೇಸ್ಟ್ ಗೆ ಅಕಸ್ಮಿಕ ಬೆಂಕಿ ತಗುಲಿಕೊಂಡಿದೆ. ಈ ವೇಳೆ ಬೆಂಕಿಯ ತೀವ್ರತೆಗೆ ಬಾಯ್ಲರ್ ಗಳು ಧಗ ಧಗನೇ ಹೊತ್ತಿ ಉರಿದಿವೆ. ಸುಮಾರು 10ರಿಂದ 12 ಬಾಯ್ಲರ್ ಗಳು ಸುಟ್ಟು ಭಸ್ಮವಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದಿಬ್ಬಣ ಆಗಮಿಸಿ, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುತ್ತಿದ್ದಾರೆ.