ಕೊಡಗು : ಶಿವರಾತ್ರಿ ದಿನದಂದೇ ಕೊಡಗು ಜಿಲ್ಲೆಯಲ್ಲಿ ಘೋರವಾದಂತಹ ಘಟನೆ ಸಂಭವಿಸಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗಲೇ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನು ದಾಳಿಯಿಂದ ಲೋಹಿತ್ (30) ಎನ್ನುವ ಯುವಕ ಸಾವನಪ್ಪಿದ್ದಾನೆ.
ಪೋದ್ದಮಾನಿ ಗ್ರಾಮದ ಬಳಿ ಕಾಫಿ ಕೊಯ್ಲು ಮಾಡುವಾಗ ಹೆಜ್ಜೆನು ದಾಳಿಯಿಂದ ಈ ದುರಂತ ಸಂಭವಿಸಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೋದ್ದಮಾನಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಹೆಜ್ಜೆನು ದಾಳಿಯ ವೇಳೆ ಲೋಹಿತ್ ಶರ್ಟ್ ಬಿಚ್ಚಿಕೊಂಡು ಓಡಿದ. ಏಕಾಏಕಿ ನೂರಾರು ಹೆಜ್ಜೆನುಗಳು ದಾಳಿ ಮಾಡಿ ಗಾಯಗೊಳಿಸಿವೆ ಹೀಗಾಗಿ ಚಿಕಿತ್ಸೆ ಫಲಿಸದೆ ಲೋಹಿತ್ ಸಾವನಪ್ಪಿದ್ದಾನೆ