ಕಲಬುರ್ಗಿ : ಕಳೆದ ಹಲೋ ತಿಂಗಳ ಹಿಂದೆ ಬಳ್ಳಾರಿ ಬೆಳಗಾವಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಿರಂತರವಾಗಿ ಬಾಣಂತಿಯರ ಸಾವು ಪ್ರಕರಣ ಇಡೀ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕಲ್ಬುರ್ಗಿಯ ಪ್ರತಿಷ್ಠಿತ ESI ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಬಾಣಂತಿಯೋರ್ವಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಕಲಬುರ್ಗಿya ESI ಆಸ್ಪತ್ರೆಯಲ್ಲಿ ಬಾಣಂತಿ ಶಿಲ್ಪ (32) ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ತೋನಸನಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ.ಸೋಮವಾರ ಹೆರಿಗೆಗೆ ಎಂದು ಇಎಸ್ಐ ಆಸ್ಪತ್ರೆಗೆ ಶಿಲ್ಪ ದಾಖಲಾಗಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ ನಂತರ ಶಿಲ್ಪಗೆ ನಿರಂತರವಾಗಿ ರಕ್ತ ನೀಡಲಾಗಿತ್ತು. ಆದರೂ ಸಹ ಚಿಕಿತ್ಸೆ ಫಲಿಸದೇ ಇದೀಗ ಲೋ ಬಿಪಿ ಯಿಂದಾಗಿ ಶಿಲ್ಪಾ ಸಾವನ್ನಪ್ಪಿದ್ದರೆ.