ಬೆಂಗಳೂರು : ಸಮಾಜಕ್ಕೆ ರಕ್ಷಣೆ ಒದಗಿಸುವವರು ಸಮಾಜಕ್ಕೆ ಮಾದರಿಯಾಗಬೇಕಿದ್ದವರಿಂದಲೇ ಇದೀಗ ಲಂಚಕ್ಕೆ ಕೈ ಒಡ್ಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಹೌದು ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರಿಂದ ಗೂಗಲ್ ಪೇ ಮೂಲಕ ಲಂಚ ಸ್ವೀಕರೀಸಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಸಂಚಾರಿ ಪೊಲೀಸರ ಭ್ರಷ್ಟಾಚಾರ ಇದೀಗ ಬಯಲಾಗಿದೆ.
ಟ್ರಾಫಿಕ್ ಫೈನ್ ನೆಪದಲ್ಲಿ ಗೂಗಲ್ ಪೇ ಮೂಲಕ ಲಂಚ ಸ್ವೀಕರಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ದಂಡ ವಿಧಿಸುವ ಬದಲು ತಮ್ಮ ಸ್ವಂತ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಫೆಬ್ರುವರಿ 21ರಂದು ವರ್ತೂರು ಕೆರೆಯ ಬಳಿ ಸವಾರ ಒನ್ ವೇ ನಲ್ಲಿ ಬಂದಿದ್ದ. ಸಂಚಾರಿ ನಿಯಮ ಉಲ್ಲಂಘಿಸಿದ್ದ ರಾಜಮಲ್ಲನನ್ನು ಪಿಸಿ ತಡೆದಿದ್ದ. ಕರ್ತವದಲ್ಲಿದ್ದ ಟ್ರಾಫಿಕ್ ಕಾನ್ಸ್ಟೇಬಲ್ ಮಂಜುನಾಥ ಸವಾರನನ್ನು ಅಡ್ಡಗಟ್ಟಿದ್ದ.
1,500 ದಂಡ ಪಾವತಿಸಲು ಸಿದ್ಧವಾಗಿದ್ದ ಸವಾರ ರಾಚಮಲ್ಲ ಆದರೆ ಸವಾರನಿಗೆ ದಂಡದ ರಶೀದಿ ನೀಡಲು ಮಂಜುನಾಥ್ ಸಿದ್ದನಿರಲಿಲ್ಲ. ಸವಾರನಿಗೆ ಗೂಗಲ್ ಪೇ ಮೂಲಕ 500 ರೂಪಾಯಿ ಪಡೆದು ಮಂಜುನಾಥ್ ಬಿಟ್ಟು ಕಳುಹಿಸಿದ್ದಾರೆ. ವೈಟ್‌ಫೀಲ್ಡ್ ಸಂಚಾರ ಉಪ ವಿಭಾಗದ ಎಸಿಪಿಗೆ ರಾಚಮಲ್ಲ ದೂರು ನೀಡಿದ್ದಾನೆ. ಗೂಗಲ್ ಪೇ ಮೂಲಕ ಹಣ ಪಡೆದ ಬಗ್ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾನೆ.
ವೈಟ್ ಫೀಲ್ಡ್ ಸಂಚಾರಿ ಠಾಣೆ ಪಿಸಿ ಮಂಜುನಾಥನ ವಿರುದ್ಧ ದೂರು ನೀಡಿದ್ದಾನೆ. ಸಂಚಾರಿ ನಿಯಮ ಉಲ್ಲಂಘನೆ ದಂಡ ಕಟ್ಟಲು ಸಿದ್ಧವಿದ್ದರೂ ನಿರ್ಲಕ್ಷ್ಯ ತೋರಿ ದಂಡದ ಬದಲು ಲಂಚ ಪಡೆದಿರುವ ಪಿಸಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾನೆ. ರಾಚಮಲ್ಲ ನೀಡಿದ ಇಮೇಲ್ ದೂರು ಸ್ವೀಕರಿಸಿದ ಎಸಿಪಿ ರಮೇಶ್. ತನಿಖೆ ನಡೆಸಿ ವರದಿ ನೀಡುವಂತೆ ಇನ್ಸ್ಪೆಕ್ಟರ್ ಗೆ ಎಸಿಪಿ ಸೂಚನೆ ನೀಡಿದ್ದಾರೆ. ವೈಟ್ ಫೀಲ್ಡ್ ಸಂಚಾರಿ ಠಾಣೆಯ ಪಿಐಗೆ ಎಸಿ ಪರಮೇಶ್ ಸೂಚನೆ ನೀಡಿದ್ದಾರೆ.