ಬೆಂಗಳೂರು : ಪತಿಯೊಬ್ಬ ತನ್ನ ಪತ್ನಿಯ ಶೀಲವನ್ನು ಶಂಕಿಸಿದ್ದು, ಅಲ್ಲದೆ ಕುಡಿದ ನಶೆಯಲ್ಲಿ ಆಕೆಯ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಿರದೇ ಪತ್ನಿಯ ಅಂತ್ಯಕ್ರಿಯೆಗೂ ಯತ್ನಿಸಿದ್ದಾನೆ. ಈ ವೇಳೆ ಸ್ಮಶಾನಕ್ಕೆ ಎಂಟ್ರಿ ಕೊಟ್ಟ ಪೊಲೀಸರು ಪತಿಯನ್ನು ಬಂಧಿಸಿ ಎಳೆದೊಯ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನೇರಳೆಘಟ್ಟ ಗ್ರಾಮದಲ್ಲಿ ನಡೆದಿದೆ.
ಹೌದು ಸೀನಿಮಿಯ ರೀತಿಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು, ಪತ್ನಿ ಅಂತ್ಯಕ್ರಿಯ ವೇಳೆ ಆರೋಪಿಯನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನೇರಳೆಘಟ್ಟ ಗ್ರಾಮದ ಪತಿ ಲಕ್ಷ್ಮಯ್ಯ ನಿಂದ ಪತ್ನಿ ರಾಧಮ್ಮ (45) ಳನ್ನು ಕೊಲೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಪತ್ನಿಯ ಜೊತೆಗೆ ಗಲಾಟೆ ಮಾಡಿದ್ದ ಲಕ್ಷ್ಮಯ್ಯ ಗಲಾಟೆಯ ವೇಳೆ ಪತ್ನಿಯ ತಲೆಯನ್ನು ಗೋಡೆಗೆ ಗುಡ್ಡಿ ಕೊಲೆ ಮಾಡಿದ್ದಾನೆ.
ಬಳಿಕ ಕುಟುಂಬಸ್ಥರು ಸೇರಿ ಕೊಲೆ ಕೇಸ್ ಅನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಹತ್ಯೆ ಮಾಡಿ ದೂರು ದಾಖಲಿಸದೆ ಅಂತ್ಯಕ್ರಿಯೆಗೆ ಯತ್ನಿಸಿದ್ದಾರೆ. ಕೊನೆ ಕ್ಷಣದಲ್ಲಿ ಪೊಲೀಸರು ಸ್ಮಶಾನಕ್ಕೆ ಎಂಟ್ರಿ ನೀಡಿ ಆರೋಪಿ ಪತಿ ಲಕ್ಷ್ಮಯ್ಯನನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆm ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.