ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಅಧಿಕಾರಿಗಳು ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿತು ಇದೀಗ ಕ್ಲೀನ್ ಚಿಟ್ ನೀಡಿರುವ ವಿಚಾರವಾಗಿ ಲೋಕಾಯುಕ್ತ ವರದಿ ಸಲ್ಲಿಸಿದೆ ಈ ಒಂದು ವರದಿಯಲ್ಲಿ ಮುಡಾ ಈ ಹಿಂದಿನ ಅಧಿಕಾರಿಗಳದ್ದೇ ತಪ್ಪಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಹೌದು ಸಿದ್ದರಾಮಯ್ಯ ಕುಟುಂಬಕ್ಕೆ ಲೋಕಾಯುಕ್ತರಿಂದ ಕ್ಲೀನ್ ಚಿಟ್ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಮುಡಾದಲ್ಲಿ ಸ್ಟೇಟ್ ಹಂಚಿಕೆ ಪ್ರಕರಣದ ವರದಿ ಸಲ್ಲಿಕೆ ಮಾಡಿದೆ. ಮುಡಾ ಅಧಿಕಾರಿಗಳ ಲೋಪ ಇದೆ ಎಂದು ವರದಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಹಿಂದಿನ ಡಿಸಿ ಕುಮಾರ್ ನಾಯಕ್, ತಹಶೀಲ್ದಾರ್ ಮಾಳಿಗೆ ಶಂಕರ್, ಆರ್ ಐ ಸಿದ್ದಪ್ಪಾಜಿ ಭೂಮಾಪಕ ಶಂಕರಪ್ಪ ಅವರಿಂದ ಲೋಪ ಆಗಿದೆ.ಅಂದಿನ ಅಧಿಕಾರಿಗಳ ತಪ್ಪಿನ ಬಗ್ಗೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿದೆ.
ಮುಡಾ ಸೈಟ್ ಗೆ ಅರ್ಜಿ ಹಾಕಿದವರು ಭೂಮಿ ಕೊಂಡವರು ಅನ್ಯಕ್ರಾಂತ ಮಾಡಿಸಿಕೊಂಡವರಲ್ಲಿ ತಪ್ಪಿಲ್ಲ. ಆದರೆ ಆ ಕೆಲಸಗಳನ್ನು ಮಾಡಿಕೊಟ್ಟವರು ತಪ್ಪು ಮಾಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3.16 ಎಕರೆ ಭೂಮಿ ಅನ್ಯಾಕ್ರಾಂತ ಮಾಡುವಾಗ ಅಧಿಕಾರಿಗಳಿಂದ ತಪ್ಪು ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ ದೇವನೂರು ಬಡಾವಣೆಯ ಮೂರನೇ ಹಂತ ರಚನೆಗೆ ಭೂಮಿ ಅಭಿವೃದ್ಧಿಯಾಗಿತ್ತು. ಆದರೂ ಸ್ಥಳ ಮಂಜೂರು ಮಾಡದೆ ವರದಿ ಮಾಡಿರುವುದು ತಪ್ಪು ಎಂದು ಅಧಿಕಾರಿಗಳ ತಪ್ಪಿನ ಬಗ್ಗೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಕ್ಷಮಿಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಸೇರಿದಂತೆ ಇತರೆ ಆರೋಪಿಗಳಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದರಿಂದ ಸದ್ಯಕ್ಕೆ ನಿರಾಳವಾಗಿದ್ದಾರೆ.