ಬೆಳಗಾವಿ : ಬೆಳಗಾವಿಯಲ್ಲಿ ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಡಕ್ಟರ್ ಅವರನ್ನು ಭೇಟಿಯಾದ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಮಾದೇವಪ್ಪ ಹುಕ್ಕೇರಿ ಅವರ ಆರೋಗ್ಯವನ್ನು ವಿಚಾರಿಸಿದರು. ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಭೇಟಿಯಾಗಿ ಮಹದೇವಪ್ಪ ಆರೋಗ್ಯ ಅವರ ವಿಚಾರಿಸಿದರು. ಕರವೇ ಕಾರ್ಯಕರ್ತರು ಈ ವೇಳೆ ಅವರಿಗೆ ಧೈರ್ಯ ತುಂಬಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಡಕ್ಟರ್ ಅವರನ್ನು ಭೇಟಿ ಮಾಡಿದೆ ಅವರಿಗೆ ಇನ್ನು ತುಂಬಾ ಎದೆ ನೋವು ಇದೆ. ಮಹಾರಾಷ್ಟ್ರದ ಪುಂಡರು ಅವರ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಅವರಿಗೆ ಇನ್ನೂ ನೋವು ಕಡಿಮೆ ಆಗಿಲ್ಲ ನನ್ನ ಎದುರುಗಡೆ ಕಣ್ಣೀರು ಹಾಕಿದರು. ಬೆಳಗಾವಿಯಲ್ಲಿ ಕನ್ನಡ ಮಾತನಾಡು ಎಂದಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಗೆ ಹಾಕುತ್ತಾರೆ ಅಂದರೆ ಇಲ್ಲಿಯ ಅಧಿಕಾರಿಗಳು ಜಿಲ್ಲಾಡಲೀಟ್ ರಾಜಕಾರಣಿಗಳು ಯಾಕೆ ಇದಾರೆ ಯಾಕೆ ಇಲ್ಲಿ ಬದುಕುತ್ತಾ ಇದ್ದೀರಿ ನೀವು?
ಆ ವಯಸ್ಸಲ್ಲಿ ಒದೆ ತಿಂದು ಕನ್ನಡಿಗ ಬೆಡ್ ಮೇಲೆ ಮಲಗಿಕೊಂಡು ಕಣ್ಣೀರು ಹಾಕುತ್ತಾನಲ್ಲ ನಿಮಗೆ ಏನಾದರೂ ಮಾನ ಮರ್ಯಾದೆ ಇದ್ದಾರೆ MES ಪುಂಡರಎಳೆ ಗೂಂಡಾ ಕಾಯ್ದೆ ಹಾಕಿ ಒಂದು ವರ್ಷದವರೆಗೆ ಜೈಲಿಗೆ ಹೋಗಬೇಕು. ಅವರನ್ನು ಕರ್ನಾಟಕದ ನೆಲದಿಂದ ಗಡಿಪಾರು ಮಾಡಬೇಕು ಅವರಿಗೆ ಕರ್ನಾಟಕದಲ್ಲಿ ಇರಲು ಲಾಯಕ್ಕಿಲ್ಲ. ಹಾಗಾಗಿ ಹಬ್ಬ ಕನ್ನಡಿಗನ ಹಾಲಿಗೆ ಮೇಲೆ ಕಣ್ಣೀರು ಹಾಕಿದ್ದು ನೋಡಿದಾಗ ನನ್ನ ರಕ್ತ ಕುದಿಯುತ್ತಿದೆ. ಯಾವ ಈ ಮರಾಠಿ ಎಸ್ ಪುಂಡರು ನನ್ನ ಕೈಗೆ ಏನಾದರೂ ಸಿಕ್ಕರೆ ಕರವೇ ಕಾರ್ಯಕರ್ತರು ಒಂದೇ ನಿಮಿಷದಲ್ಲಿ ಅವರನ್ನು ಏನು ಬೇಕಾದರು ಮಾಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.