ವಿಜಯಪುರ : ನಿನ್ನೆ ತಾನೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಯಾಗ್ರಾಜ್ ನ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ 6 ಜನರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೀಗ ಗುಜರಾತ್ ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು ರಾಜ್ಯದ ವಿಜಯಪುರ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು ಗುಜರಾತ್ ನ ಪೋರ್ ಬಂದರ್ ಬಳಿ ಭೀಕರ ಅಪಘಾತ ಸಂಭವಿಸಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಬ್ಬರು ಸಾವನಪ್ಪಿದ್ದಾರೆ. ನಿಂತಿದ್ದ ಟಿಪ್ಪರ್ ಗೆ ವಾಹನವೊಂದು ವೇಗವಾಗಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ಇಬ್ಬರೂ ಸಾವನಪ್ಪಿದ್ದಾರೆ. ವಿಶ್ವನಾಥ ಅವಜಿ (55) ಹಾಗೂ ಮಲ್ಲಿಕಾರ್ಜುನ ಸದ್ದಲಗೆ (40) ಮೃತ ದುರ್ದೇವಿಗಳು ಎಂದು ತಿಳಿದುಬಂದಿದೆ.