ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ 2025-26ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ದಾಖಲಾತಿಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಥಮ ಪಿಯುಸಿಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾದ ನಂತ್ರ ಮೊದಲ ಕಾರ್ಯನಿರತ ದಿನದಿಂದ ದಾಖಲಾತಿ ಪ್ರಾರಂಭಗೊಳ್ಳಲಿದೆ. ದ್ವಿತೀಯ ಪಿಯುಸಿಗೆ ದಿನಾಂಕ 22-05-2025ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.
ಶಾಲಾ ಶಿಕ್ಷಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025-26ನೇ ಸಾಲಿನ ಶೈಕ್ಷಣಿಕ ಅವಧಿಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮೊದಲನೇ ಅವಧಿ ದಿನಾಂಕ 02-06-2025ರಿಂದ 21-09-2025ರವರೆಗೆ ನಡೆಯಲಿದೆ. ಎರಡನೇ ಅವಧಿಯು ದಿನಾಂಕ 08-10-2025ರಿಂದ 31-03-2026ರವರೆಗೆ ನಡೆಯಲಿದೆ.
ಇನ್ನೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿಕೊಂಡ ವೇಳಾಪಟ್ಟಿಯಂತೆ ತರಗಳಿಗಳು ದಿನಾಂಕ 02-06-2025ರಿಂದ ಆರಂಭಗೊಳ್ಳಲಿದೆ. ಮಧ್ಯಂತರ ರಜೆಯು ದಿನಾಂಕ 22-09-2025ರಿಂದ ದಿನಾಂಕ 07-10-2025ರವರೆಗೆ ಇರಲಿದೆ. ಕೊನೆಯ ಕಾರ್ಯನಿರತ ದಿನ ದಿನಾಂಕ 31-03-2026 ಆಗಿದೆ. ಬೇಸಿಗೆ ರಜೆ ದಿನಾಂಕ 01-04-2026ರಿಂದ ಪ್ರಾರಂಭವಾಗಲಿದೆ.
ದಿನಾಂಕ 16-06-2025ರಂದು ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ಪ್ರಾರಂಭವಾಗಲಿವೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ಪ್ರಥಮ ಕಿರುಪರೀಕ್ಷೆಯು ದಿನಾಂಕ 11-08-2025ರಿಂದ 14-08-2025ರವರೆಗೆ ನಡೆಯಲಿದೆ.
ದಿನಾಂಕ 21-01-2026ರಿಂದ 14-02-2026ರವರೆಗೆ ದ್ವಿತೀಯ ಪಿಯುಸಿ ಪ್ರಾಯೋಗಿ ಪರೀಕ್ಷೆಗಳು ನಡೆಯಲಿವೆ. ದಿನಾಂಕ 10-02-2026ರಿಂದ 25-02-2026ರವರೆಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದಾವೆ. ದಿನಾಂಕ 26-02-2026ರಿಂದ 21-03-2026ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಲಿದೆ.
ಕರ ವಸೂಲಾತಿಯಲ್ಲಿ ನಿರ್ಲಕ್ಷ್ಯ ತೋರಿದ ‘PDO’ಗಳಿಗೆ ಶಾಕ್: ರಾಜ್ಯ ಸರ್ಕಾರದಿಂದ ‘ವಾರ್ಷಿಕ ವೇತನ ಬಡ್ತಿ’ಗೆ ತಡೆ
BREAKING : ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ‘HSRP’ ನಂಬರ್ ಪ್ಲೇಟ್ ಅಳವಡಿಕೆ ಮಾ.31ರವರೆಗೆ ವಿಸ್ತರಣೆ