ಚಿಕ್ಕಮಗಳೂರು : ‘KSRTC ಪಲ್ಲಕ್ಕಿ ಬಸ್ ಗೆ ಹಿಂದಿನಿಂದ ವೇಗವಾಗಿ ಬಂದು ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆಂಧ್ರಪ್ರದೇಶದ ಹಲವು ಪ್ರವಾಸಿಗರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಕಳಸ ವ್ಯಾಪ್ತಿಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ.
ಕಳಸ-ಹೊರನಾಡು ರಸ್ತೆಯಲ್ಲಿ ಆಂಧ್ರ ಪ್ರವಾಸಿಗರಿದ್ದ ಕಾರು KSRTC ಪಲ್ಲಕ್ಕಿ ಬಸ್ ಗೆ ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಆಂಧ್ರ ಮೂಲದ ಪ್ರವಾಸಿಗರಿಗೆ ಗಾಯವಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಒಂದು ಅಪಘಾತದಲ್ಲಿ ಕಾರು ಹಿಂದಿನಿಂದ ವೇಗವಾಗಿ ಬಂದು ಬಸ್ ಕೆಳಗೆ ನುಗ್ಗಿದೆ. ಸರ್ಕಾರಿ ಬಸ್ ಕೆಳಗೆ ಕಾರು ಸಿಲುಕಿದೆ. ಕೂಡಲೇ ಸ್ಥಳೀಯರು ಕಾರನ್ನು ಹೊರಗೆ ಎಳೆದು ತೆಗೆದಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.