ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಡ್ಡಿ ದಂಧೆಕೊರರ ಕಿರುಕುಳ ಮುಂದುವರೆದಿದೆ. ಕಿರುಕುಳ ಬಡ್ಡಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ಪುಂಡರು ದಾಂಧಲೆ ನಡೆಸಿದ್ದಾರೆ. ಹುಬ್ಬಳ್ಳಿಯ ಸೆಟ್ಲಮೆಂಟ್ ಏರಿಯಾದಲ್ಲಿ ಬಡ್ಡಿ ದಂಧೆಕೋರರು ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.
ಭಾರತಿ ದೊಡ್ಡಮನಿ ಎಂಬುವರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಭಾರತೀ ದೊಡ್ಡಮನಿ 1 ಲಕ್ಷ ಹಣ ಸಾಲ ಪಡೆದಿದ್ದರು. ಆದರೆ ಕಳೆದ 15 ವರ್ಷದ ಗಳಿಂದ ಬರಿ ಒಂದು ಲಕ್ಷಕ್ಕೆ ಬಡ್ಡಿ ಕಟ್ಟುತ್ತಾನೆ ಬಂದಿದ್ದಾರೆ. ಬಡ್ಡಿ ಕಟ್ಟುತ್ತಿದ್ದರು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಭಾರತೀಯ ದೊಡ್ಡಮನಿ ಬಡ್ಡಿ ಕಟ್ಟಿಲ್ಲ. ಹಾಗಾಗಿ ಮನೆಗೆ ನುಗ್ಗಿದ ಪುಂಡರು ಮನೆಯಲ್ಲಿ ಬಿಯರ್ ಕುಡಿದು, ಸಿಗರೇಟ್ ಸೇದಿ ಗಲಾಟೆ ಮಾಡಿದ್ದಾರೆ. ಬಡ್ಡಿ ಹಣ ಕೊಡುತ್ತೇನೆ ಅಂದರೂ ಬಿಡದೆ ಗಲಾಟೆ ಮಾಡಿದ್ದಾರೆ. ಬಡ್ಡಿ ದಂಧೆಕೊರರ ಹೆಸರು ಹೇಳುವುದಕ್ಕೂ ಭಾರತಿ ಭಯಪಟ್ಟಿದ್ದಾರೆ.