ಮಂಡ್ಯ : ಮಂಡ್ಯದಲ್ಲಿ ಸಾಲ ಬಾದೆಗೆ ಬೇಸತ್ತು ಒಂದೇ ಕುಟುಂಬದ ಮೂವರು ಮಂಡ್ಯ ತಾಲೂಕಿನ ಯಲಿಯೂರು ಬಳಿ ವಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು ಮೊದಲು ಮೂವರು ವಿಷ ಸೇವಿಸಿದ್ದಾರೆ. ಬಳಿಕ ವಿಸಿ ನಾಲೆಗೆ ಹಾರಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೌದ್ ಗಂಜಾಂ ನಿಂದ ಮೂವರು ಆಟೋದಲ್ಲಿ ವಿಸಿ ನಾಲೆ ಬಳಿ ಬಂದಿದ್ದಾರೆ. ನಾಲೆ ಮೇಲೆ ಆಟವನ್ನು ನಿಲ್ಲಿಸಿದ್ದಾರೆ ನಾಲೆ ಬಳಿಯೇ ವಿಷ ಕುಡಿದು ನೀರಿಗೆ ಹಾರಿದ್ದಾರೆ. ಮಂಡ್ಯ ತಾಲೂಕಿನ ಚಂದಗಾಲು ಬಳಿ ಘಟನೆ ನಡೆದಿದೆ. ಮೊದಲು ವಿಷ ಸೇವಿಸಿ, ನಂತರ ವಿಸಿ ನಾಲೆಗೆ ಹಾರಿ ಮೂವರು ಆತ್ಮಹತ್ಯೆ ಶರಣಾಗಿದ್ದಾರೆ. ಮಂಡ್ಯ ತಾಲೂಕಿನ ಚಂದಗಾಲು ಬಳಿ ವಿಸಿ ನಾಲೆಗೆ ಹಾರಿ ಶರಣಾಗಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದರು.
ಘಟನೆ ಹಿನ್ನೆಲೆ?
ಸಾಲದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಿವಾಸಿಗಳು ಎಂದು ಬಂದಿದೆ. ಮಂಡ್ಯ ತಾಲೂಕಿನ ವಿ ಸಿ ನಾಲಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮಾಸ್ತಪ್ಪ (65) ಪತ್ನಿ ರತ್ನಮ್ಮ (45) ಮಗಳು ಲಕ್ಷ್ಮಿ (14) ಎಂದು ತಿಳಿದುಬಂದಿದೆ. ಮಾಸ್ತಪ್ಪ ವಿವಿಧಡೆ ಒಟ್ಟು 12 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಪತ್ನಿ ಮಗಳೊಂದಿಗೆ ಆತ್ಮಹತ್ಯೆಗೆ ಮಾಸ್ತಪ್ಪ ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಶ್ರೀರಂಗಪಟ್ಟಣದ ಗಂಜಾಂ ನಿವಾಸಿಯಾಗಿರುವ ಮೃತರು ಎಂದು ತಿಳಿದುಬಂದಿದ್ದು, ಮಾಸಪ್ಪ ಆಟೋ ಚಾಲಕರಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಮಾಸ್ತಪ್ಪ ಹಾಗು ರತ್ನಮ್ಮರ ಮೃತದೇಹ ಪತ್ತೆಯಾಗಿದ್ದು, ಮಗಳು ಲಕ್ಷ್ಮೀಯ ಮರೆತಮೃತ ದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.