ವಿಜಯಪುರ : ಇತ್ತೀಚಿಗೆ ವಿಜಯಪುರ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.ಈ ಒಂದು ಜಯಂತಿಯಲ್ಲಿ ಒಂದು ಕಡೆ ಶಿವಾಜಿ ಮಹಾರಾಜರ ಭಾವಚಿತ್ರ ಹಿಡಿದುಕೊಂಡು ಯುವಕರು ಕುಣಿದು ಕುಪ್ಪಳಸಿದರೆ ಮತ್ತೊಂದು ಕಡೆ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯಿ ಫೋಟೋ ಹಿಡಿದುಕೊಂಡು ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಹೌದು ವಿಜಯಪುರದಲ್ಲಿ ಕೆಲ ಯುವಕರು ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯಿ ಭಾವ ಚಿತ್ರ ಹಿಡಿದು ನೃತ್ಯ ಮಾಡಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ವಿಜಯಪುರ ನಗರದಲ್ಲಿ ನಡೆದ ಶಿವಾಜಿ ಜಯಂತಿ ಉತ್ಸವದ ಅಂಗವಾಗಿ ಮೆರವಣಿಗೆ ನಡೆಯಿತು. ಈ ವೇಳೆ ಮೆರವಣಿಗೆಯಲ್ಲಿ ಕೆಲ ಯುವಕರು ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯಿ ಫೋಟೊ ಹಿಡಿದು ಡಾನ್ಸ್ ಮಾಡಿದ್ದಾರೆ.
ಶಿವಾಜಿ ಮಹಾರಾಜರ ಮೆರವಣಿಗೆ ಸಂದರ್ಭದಲ್ಲಿ ಒಂದು ಕಡೆ ಕೇಸರಿ ಧ್ವಜ, ಇನ್ನೊಂದೆಡೆ ಶಿವಾಜಿ ಮಹಾರಾಜರು ಭಾವಚಿತ್ರವಿರುವ ಕೇಸರಿ ಧ್ವಜಗಳ ನಡುವೆ ಗ್ಯಾಂಗ್ ಸ್ಟಾರ್ ಪೊಟೋ ಕೂಡ ಕಂಡು ಬಂದಿದೆ. ವಿಜಯಪುರ ನಗರದ ಗಾಂಧಿ ಚೌಕ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಶಿವಾಜಿ ಜಯಂತಿ ಕಾರ್ಯಕ್ರಮದ ಮೆರವಣಿಗೆ ವೇಳೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.