ಸೊಲ್ಲಾಪುರ : ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ, ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯ ಸೂಳೆಬಾವಿ ಹಾಗೂ ಬಾಳೆಕುಂದ್ರಿ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಮಹಾದೇವ್ ಹುಕ್ಕೇರಿ ಮೇಲೆ ಮಹಾರಾಷ್ಟ್ರದ ಪುಂಡರು ಹಲ್ಲೆ ನಡೆಸಿದ್ದರು. ಅದಾದ ಬಳಿಕ ಕರ್ನಾಟಕ ಹಾಗು ಮಹಾರಾಷ್ಟ್ರದಲ್ಲಿ ಹಲವಾರು ಬೆಳವಣಿಗೆ ಆದವು. ಇದೀಗ ಸೋಲಾಪುರದಲ್ಲಿ ಕೆಎಸ್ಆರ್ಟಿಸಿ ಬಸ್ ತಡೆದು ಬಸ್ಗೆ ಕೇಸರಿ ಬಣ್ಣ ಎರಚಿ ಶಿವಸೇನೆ ಪುಂಡರು ಅಟ್ಟಹಾಸ ಮೆರೆದಿದ್ದಾರೆ.
ಹೌದು ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಮತ್ತೊಂದು ಬಸ್ ಅಡ್ಡಗಟ್ಟಿ ದರ್ಪ ಮೆರೆದಿದ್ದಾರೆ.ಮಹಾರಾಷ್ಟ್ರದ ಸೋಲಾಪುರ ಪಟ್ಟಣದಲ್ಲಿ ಶಿವಸೇನೆ ಪುಂಡರ ಅಟ್ಟಹಾಸ ಇದೀಗ ಮಿತಿ ಮೀರಿದ್ದು, ಬಸ್ ಮೇಲೆ ಕೇಸರಿ ಬಣ್ಣ ಬಳಿದು ಪುಂಡಾಟಿಗೆ ಮೆರೆದಿದ್ದಾರೆ. ಅಲ್ಲದೆ ನಿನ್ನೆ ಕೊಳಪುರದಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಯ ಅಂಬಾರಿ ಬಸ್ ಮೇಲೆ ಜೈ ಮಹಾರಾಷ್ಟ್ರ ಎಂದು ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದರು.
ರಾಜ್ಯದ ಬಸ್ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಚಾಲಕ ನಿರ್ವಾಹಕನಿಗೂ ಜೈ ಮಹಾರಾಷ್ಟ್ರ ಅನ್ನುವಂತೆ ಬಲವಂತ ಮಾಡಿದ್ದಾರೆ. ಚಾಲಕ ಮತ್ತು ನಿರ್ವಾಹಕನಿಗೂ ಕೇಸರಿ ಬಣ್ಣ ಬಳಿದು ದರ್ಪ ಮೆರೆದಿದ್ದಾರೆ. ಸೊಲ್ಲಾಪುರ ಹಾಗೂ ಇಳಕಲ್ ಮಾರ್ಗದ ಬಸ್ ತಡೆದು ಇದೀಗ ಶಿವಸೇನೆ ಪುಂಡಾಟ ನಡೆಸಿದೆ