ಮಂಡ್ಯ : ಕೇವಲ ಯುವತಿಗಾಗಿ ಅಪ್ರಾಪ್ತ ಬಾಲಕರು ಲಾಂಗು ಮಚ್ಚು ಹಿಡಿದುಕೊಂಡು ಯುವಕನನ್ನು ಊರ ಹೊರವಲಯದ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಮಾರಣಾಂತಕವಾಗಿ ಹಲ್ಲೆ ನಡೆಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಹೌದು ಲಾಂಗು ಮಚ್ಚು ಹಿಡಿದು ಅಪ್ರಾಪ್ತ ಬಾಲಕರ ಅಟ್ಟಹಾಸ ಮೆರೆದಿದ್ದು, ಫೇಸ್ಬುಕ್ ಮಾಡಿ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಲಾಂಗ್, ಮಚ್ಚು ಹಿಡಿದು ಅವಾಚ್ಯ ಶಬ್ದದಿಂದ ನಿಂದಿಸಿ ಯುವಕನಿಗೆ ಅಪ್ರಾಪ್ತ ಬಾಲಕರು ಥಳಿಸಿರುವ ಘಟನೆ ನಡೆದಿದ್ದು ಮಂಡ್ಯ ಹೊರವಲಯದ ಸ್ಮಶಾನಕ್ಕೆ ಕರಿತಂದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಯುವತಿ ಒಬ್ಬಳ ವಿಚಾರವಾಗಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇನ್ಯಾವತ್ತೂ ಮಂಡ್ಯಕ್ಕೆ ಬರಲ್ಲ ಬಿಟ್ಟು ಬಿಡಿ ಎಂದು ಬೇಡಿಕೊಂಡರು ಅಪ್ರಾಪ್ತ ಬಾಲಕರು ಯುವಕನಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.