ಮಧ್ಯಪ್ರದೇಶ : ಕುಂಭ ಮೇಳಕ್ಕೆ ಹೋಗುತ್ತಿದ್ದ ಯಾತ್ರೀಕರ ಕ್ರೂಜರ್ ವಾಹನವೊಂದು ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ 6 ಜನರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಜಬಲ್ ಪುರದ ಪೆಹಾರ ಟೋಲ್ ನಾಕಾ ಬಳಿ ನಡೆದಿದೆ.
ಮೃತರನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಾಲಚಂದ್ರ ಗೌಡ (50) ಸುನಿಲ್ (45) ಬಸವರಾಜ್ ಕುರ್ತಿ (63) ಬಸವರಾಜ ದೊಡ್ಡಮ್ಮಗೋಳ (49) ಈರಣ್ಣ ಸೀಮನಕಟ್ಟಿ (27) ಹಾಗು ವಿರುಪಾಕ್ಷ ಗುಮತಿ (61) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಗಾಯಗೊಂಡ ಮುಸ್ತಾಕ್ ಶಿಂದೀಕುರಬೆಟ್ ಸದಾಶಿವ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ದಿನದ ಹಿಂದೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಿಂದ ಉತ್ತರಪ್ರದೇಶದ ಪ್ರಯಾಗ್ರಾಜ್ ಗೆ ಭಕ್ತರು ತೆರಳಿದ್ದರು. ಉತ್ತರಪ್ರದೇಶದ ಪ್ರಯಾಗ್ ರಾಜ್ ಗೆ ತೆರಳುತ್ತಿದ್ದಾಗ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ನಿಂತಿದ್ದ ಬಸ್ ಗೆ ಕ್ರೂಜರ್ ವಾಹನ ಡಿಕ್ಕಿಯಾಗಿ 6 ಜನರು ದುರ್ಮರಣ ಹೊಂದಿದ್ದಾರೆ. ಮೃತರನ್ನು ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆಯ ನಿವಾಸಿಗಳು ಎಂದು ತಿಳಿದುಬಂದಿದೆ.