ಬೆಳಗಾವಿ: ಜಿಲ್ಲೆಯಲ್ಲಿ ಕನ್ನಡ ಮಾತನಾಡು ಎಂಬುದಾಗಿ ಹೇಳಿದ್ದಕ್ಕೆ ಕೆ ಎಸ್ ಆರ್ ಟಿ ಸಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿತ್ತು. ಈಗಾಗಲೇ ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಇಂದು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಡ ಮಾತನಾಡು ಎಂಬುದಾಗಿ ಕಂಡಕ್ಟರ್ ಮಹಾದೇವ್ ಹೇಳಿದ್ದಕ್ಕೆ ಯುವಕರ ಗುಂಪೊಂದು ಬಸ್ ಅಡ್ಡಗಟ್ಟಿ ಹಲ್ಲೆ ನಡೆಸಿತ್ತು. ಈ ಸಂಬಂಧ ಮಹಾದೇವ್ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರು ಆದರಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
ಇಂದು ಆರೋಪಿ ಮೋಹನ್ ಹಂಚಿನಮನಿ ಎಂಬಾತನನ್ನು ಬಂಧಿಸಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಅಪ್ರಾಪ್ತ ಸೇರಿದಂತೆ ಐವರನ್ನು ಮಾರಿಹಾಳ ಠಾಣೆಯ ಪೊಲೀಸರು ಬಂಧಿಸಿದಂತೆ ಆಗಿದೆ.
ದೊಡ್ಡಬಳ್ಳಾಪುರದಲ್ಲಿ ಮಿನಿ ಬಸ್ ಪಲ್ಟಿಯಾಗಿ ಮಗು ಸೇರಿ ಮೂವರಿಗೆ ತೀವ್ರ ಗಾಯ
Watch Video: ಹಮಾಸ್ ಸೈನಿಕನ ಹಣೆಗೆ ಮುತ್ತಿಟ್ಟ ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳು | Israel-Hamas war