ಹುಬ್ಬಳ್ಳಿ : ಸಾಮಾನ್ಯವಾಗಿ ಪೊಲೀಸರು ಸಾರ್ವಜನಿಕರ ಕಣ್ಣಿಗೆ ಕೆಟ್ಟವರಾಗಿ ಕಾಣುತ್ತಾರೆ. ಆದರೆ ಅವರ ಕರ್ತವ್ಯವೆ ಹಾಗಿರುವಾಗ ಆ ರೀತಿ ಕಾಣುವುದು ಸಹಜ. ಇದೀಗ ಪೊಲೀಸರಲ್ಲಿ ಕೂಡ ಮಾನವೀಯತೆ ಇದೆ ಅನ್ನುವುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ಹುಬ್ಬಳ್ಳಿಯಲ್ಲಿ ತಡರಾತ್ರಿ ಯುವಕನೊಬ್ಬ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹೃದಯಘಾತವಾಗಿದೆ ಕೂಡಲೇ ಇನ್ಸ್ಪೆಕ್ಟರ್ ಒಬ್ಬರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಹುಬ್ಬಳ್ಳಿ ಧಾರವಾಡ ರಸ್ತೆಯ ಕಿಮ್ಸ್ ಮುಂಭಾಗ ತಡರಾತ್ರಿ ಯುವಕನಿಗೆ ಹೃದಯಘಾತವಾಗಿದೆ. ಹೃದಯಘಾತದಿಂದ ಯುವಕ ಮುಷ್ತಾಕ್ ಬೈಕ್ ನಿಂದ ಕೆಳಗೆ ಬಿದ್ದಿದ್ದಾನೆ. ತಕ್ಷಣ ಯುವಕನನ್ನು ಪೊಲೀಸ್ ಇನ್ಸ್ಪೆಕ್ಟರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಧಾರವಾಡ ಪೂರ್ವ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಡಿಸೋಜಾ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಮುಷ್ತಾಕ್ಗೆ ಚಿಕಿತ್ಸೆ ನೀಡಲಾಗುತ್ತಿದೆ.