ನ್ಯೂಯಾರ್ಕ್ : ಈಗಾಗಲೇ ಹಲವು ದೇಶಗಳ ಮೇಲೆ ತೆರಿಗೆ ಹೇಳಿರುವ ಅಮೆರಿಕ ಅಧ್ಯಕ್ಷ ಅಡೊನಾಲ್ಡ್ ಟ್ರಂಪ್ ಶೀಘ್ರದಲ್ಲಿ ಚೀನಾ ಮತ್ತು ಭಾರತದ ಮೇಲೂ ಪ್ರತಿ ತೆರಿಗೆಯನ್ನು ಹೇಳುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ ಭಾರತ ನಮ್ಮ ವಸ್ತುಗಳ ಮೇಲೆ ಭಾರಿ ತೆರಿಗೆ ಹೇರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಅವರು, ಭಾರತ ನಮ್ಮ ವಸ್ತುಗಳ ಮೇಲೆ ಭಾರಿ ತೆರಿಗೆ ಹೇರುತ್ತಿದೆ. ಅದಕ್ಕೆ ಪ್ರತಿಯಾಗಿ ನಾವೂ ಅಂತೆಯೇ ಮಾಡುತ್ತೇವೆ. ಇಷ್ಟರವರೆಗೆ ನಾವು ಹಾಗೆ ಮಾಡಿರಲಿಲ್ಲ. ಆದರೆ ಈಗ ಅದರ ತಯಾರಿ ನಡೆಸಿದ್ದೇವೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾಗಲೂ ಹೇಳಿದ್ದೆ’ ಎಂದರು. ಇದೇ ವೇಳೆ ಚೀನಾದ ಮೇಲೆಯೂ ಭಾರೀ ತೆರಿಗೆ ಹೇರುವುದಾಗಿ ಘೋಷಿಸಿದರು.