ಚಿತ್ರದುರ್ಗ : ಬೆಳಗಾವಿಯಲ್ಲಿ ಕನ್ನಡ ಮಾತನಾಡಿ ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆಯನ್ನು ಖಂಡಿಸಿ, ನಿನ್ನೆ ಚಿತ್ರದುರ್ಗದಲ್ಲಿ ಮಹಾರಾಷ್ಟ್ರದ ಬಸ್ ಚಾಲಕನಿಗೆ ಕನ್ನಡ ಪರ ಸಂಘಟನೆಯ ಹಲವು ಕಾರ್ಯಕರ್ತರು ಚಾಲಕನಿಗೆ ಮಸಿ ಬಳೆದು ಆಕ್ರೋಶ ಹೊರಹಾಕಿದ್ದರು. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಪೊಲೀಸರು 8 ಜನ ಕನ್ನಡ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಘಟನೆ ಖಂಡಿಸಿ ಮಹಾರಾಷ್ಟ್ರ ಬಸ್ ಚಾಲಕನಿಗೆ ಮಸಿ ಬಳಿದ ವಿಚಾರಕ್ಕೆ ಸಂಬಂಧಪಟ್ಟಂತೆ ಐಮಂಗಲ ಠಾಣೆಯ ಪೊಲೀಸರಿಂದ ಕನ್ನಡ ಪರ ಕಾರ್ಯಕರ್ತರನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ನವನಿರ್ಮಾಣ ವೇದಿಕೆಯ 8 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಗುಯಿಲಾಳ ಟೋಲ್ ಬಳಿ ನಿನ್ನೆ ಮಹಾರಾಷ್ಟ್ರ ಬಸ್ ಚಾಲಕನಿಗೆ ಇವರು ಮಸಿ ಬಳಿದಿದ್ದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗುಯಿಲಾಳ ಬಳಿ ಒಂದು ಘಟನೆ ನಡೆದಿತ್ತು. ನವ ನಿರ್ಮಾಣ ವೇದಿಕೆಯ ತಿಪ್ಪೇಸ್ವಾಮಿ, ಲಕ್ಷ್ಮಿಕಾಂತ್ ಪ್ರವೀಣ್ ಸೇರಿದಂತೆ ಒಟ್ಟು 8 ಜನರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.