ಬೆಂಗಳೂರು : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನಿನ್ನೆ ಒಂದೇ ದಿನ ರಾಜ್ಯದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತುಮಕೂರಲ್ಲಿ ಇಬ್ಬರು ವ್ಯಕ್ತಿಗಳು ಹಾಗೂ ಕೋಲಾರದಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದರು ಸಹ ಇದೀಗ ಆತ್ಮಹತ್ಯೆಗಳಿಗೆ ಕಡಿವಾಣ ಬಿದ್ದಿಲ್ಲ. ತುಮಕೂರಲ್ಲಿ ಒಬ್ಬ ಆಟೋ ಚಾಲಕ, ಓರ್ವ ಮಹಿಳೆ ಹಾಗೂ ಕೋಲಾರದಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ನಡೆದಿದೆ.
ಹೌದು ಸುಗ್ರೀವಾಜ್ಞೆ ಜಾರಿ ಬಳಿಕವು ಮೈಕ್ರೋ ಟಾರ್ಚರ್ ನಿಂತಿಲ್ಲ. ಇದೀಗ ಗೃಹ ಸಚಿವರ ತವರಿನಲ್ಲಿ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆ ಎಂದು ತುಮಕೂರಿನಲ್ಲಿ ಒಂದೇ ದಿನ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂಜನಮೂರ್ತಿ (35) ಆತ್ಮಹತ್ಯೆಗೆ ಶರಣಾದವರು. ಅಂಜನಮೂರ್ತಿ ಬಟವಾಡಿಯ ಮಹಾಲಕ್ಷ್ಮೀ ನಗರದ ನಿವಾಸಿ ಎಂದು ತಿಳಿದುಬಂದಿದೆ.ಆಂಜನೇಮೂರ್ತಿ ಆಟೋ ಚಾಲಕನಾಗಿದ್ದು, ಫೈನಾನ್ಸ್ ಕಿರುಕುಳಕ್ಕೆ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.ಹಣ ನೀಡುವಂತೆ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ವಿಡಿಯೋದಲ್ಲಿ ಮನವಿ ಮಾಡಿದ್ದಾನೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಇದೆ ಫೈನಾನ್ಸ್ ಕಿರುಕುಳಕ್ಕೆ ತುಮಕೂರಲ್ಲಿ ಮಹಿಳೆ ಒಬ್ಬರು ಸೂಸೈಡ್ ಮಾಡಿಕೊಂಡಿದ್ದಾರೆ. ಕುಣಿಗಲ್ ತಾಲೂಕಿನ ಕುತ್ತಿಪುರದಲ್ಲಿ ಈ ಒಂದು ಘಟನೆ ನಡೆದಿದೆ. ನೇಣು ಬಿಗಿದುಕೊಂಡು ಅಜೀಜ್ ಉನಿಸಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಅಜೀಜಾ ಅವರು 12 ಲಕ್ಷ ರೂಪಾಯಿ ಸಾಲವನ್ನು ಬೇರೆ ಬೇರೆ ಫೈನಾನ್ಸ್ ಗಳಿಂದ ತೆಗೆದಿದ್ದರು.ಆಶೀರ್ವಾದ, ಸೂರ್ಯೋದಯ ಬಜಾಜ್ ಸೇರಿದಂತೆ ವಿವಿಧ ಫೈನಾನ್ಸ್ ನಿಂದ ಉನ್ನಿಸಾ ಸಾಲವನ್ನು ಪಡೆದಿದ್ದರು. ಕಳೆದ ಕೆಲವು ತಿಂಗಳಿಂದ ಸಾಲ ಮರುಪಾವತಿ ಮಾಡಿರಲಿಲ್ಲ. ಮನೆಗೆ ಬಂದು ಹಣ ಕಟ್ಟುವಂತೆ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಹಾಗಾಗಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕೋಲಾರದಲ್ಲಿ ರೈತ ನೇಣಿಗೆ ಶರಣು
ಇನ್ನು ಕೋಲಾರ ಜಿಲ್ಲೆಯ ಮುಳ ಬಾಗಿಲು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾನೆ. ಕೊತ್ತೂರು ಗ್ರಾಮದ ಚಂದ್ರಪ(40) ಮೃತ ರೈತ ಎಂದು ತಿಳಿದುಬಂದಿದೆ. ಇವರು ತಮ್ಮ 3 ಎಕರೆ ಜಮೀನಿನ ಜತೆಗೆ ಬೇ ರೊಬ್ಬರ ಜಮೀನಿನನ್ನು ಪಡೆದು ಕೃಷಿ ಚಟುವಟಿಕೆಗೆ 4 ಬ್ಯಾಂಕ್‌ಗಳು, ಖಾಸಗಿ ಮತ್ತು ಫೈನಾನ್ಸ್‌ಗಳಿಂದ ಸುಮಾರು ೪ 20 ಲಕ್ಷ ಸಾಲ ಪಡೆದಿದ್ದರು. ಸಾಲಕ್ಕಾಗಿ ಖಾಸಗಿ ಫೈನಾನ್ಸ್ ಸಿಬ್ಬಂದಿ ಮನೆ ಬಳಿ ಬಂದು ಹಣ ಕಟ್ಟುವಂತೆ ನಿಂದಿಸಿದರು. ಇದರಿಂದ ಬೇಸತ್ತು ಶನಿವಾರ ತಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.