ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಭೀಕರವಾದಂತಹ ಕೊಲೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ KSRTC ಬಸ್ ನಲ್ಲೆ ವ್ಯಕ್ತಿಗೆ ಚಾಕು ಇರಿದು ಹತ್ಯೆಗೈದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ದುಂಡಸಿನಗರದ ಸರ್ಕಾರಿ ಆಸ್ಪತ್ರೆಯ ಬಳಿ ನಡೆದಿದೆ.
ದುಂಡಸಿನಗರದ ಪ್ರೀತಂ ಡಿಸೋಜ ಎನ್ನುವ ವ್ಯಕ್ತಿಯನ್ನು ಹತ್ಯೆಗೈಯ್ಯಲಾಗಿದೆ. ಕೊಲೆ ಮಾಡಿದ ವ್ಯಕ್ತಿಯನ್ನು ಗಂಗಾಧರ ಎಂದು ತಿಳಿದುಬಂದಿದೆ. ಪ್ರೀತಂ ಶಿರಸಿಯ ಪತ್ನಿ ಮನೆಗೆ ಬಂದಿದ್ದ. ಪತ್ನಿ ಜೊತೆ ಬಸ್ ನಲ್ಲಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಚಲಿಸುತ್ತಿದ್ದ ಸರ್ಕಾರಿ ಬಸ್ ನಲ್ಲಿ ಪ್ರೀತಂ ಡಿಸೋಜ ಭೀಕರ ಕೊಲೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸರ್ಕಾರಿ ಆಸ್ಪತ್ರೆಯ ಬಳಿ ಈ ಒಂದು ಘಟನೆ ನಡೆದಿದೆ. ಪ್ರಯಾಣಿಕ ಪ್ರೀತಂ ಡಿಸೋಜಗೆ ಗಂಗಾಧರ ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಆ ಕೊಲೆ ಆರೋಪಿ ಗಂಗಾಧರ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.