ಬೆಳಗಾವಿ: ಮರಾಠಿಯಲ್ಲಿ ಟಿಕೆಟ್ ಕೇಳ್ತೀಯಲ್ಲ ಕನ್ನಡ ಬರೋದಿಲ್ವ? ಕನ್ನಡ ಮಾತನಾಡು ಎಂದ ಕೆ ಎಸ್ ಆರ್ ಟಿಸಿ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣದಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವತಿಯಿಂದ ನಿರ್ವಾಹಕನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ.
ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಟಿಕೆಟ್ ನೀಡುವಂತೆ ಮರಾಠಿಯಲ್ಲೇ ಕೇಳಿದಂತ ಯುವತಿಗೆ ಕನ್ನಡ ಬರೋದಿಲ್ವ ಕನ್ನಡದಲ್ಲೇ ಕೇಳಿ ಎಂಬುದಾಗಿ ಕಂಡಕ್ಟರ್ ತಿಳಿಸಿದ್ದರು. ಇಷ್ಟಕ್ಕೇ ಮರಾಠಿ ಯುವಕರು ಬಸ್ ನಿಲ್ಲಿಸಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು.
ಬೆಳಗಾವಿಯ ಸುಳೇಬಾವಿ ಹಾಗೂ ಬಾಳೆಕುಂದ್ರಿ ಮಾಗ್ರ ಮಧ್ಯದಲ್ಲಿ ಕನ್ನಡ ಮಾತನಾಡಿ ಎಂದಿದ್ದಕ್ಕೆ ಮರಾಠಿ ಯುವಕರು ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾಗಿದ್ದಂತ ಕಂಡಕ್ಟರ್ ಮಹದೇವ ಹುಕ್ಕೇರಿ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಈ ಪ್ರಕರಣ ಸಂಬಂಧ ನಿರ್ವಾಹಕ ನೀಡಿದಂತ ದೂರಿನ ಹಿನ್ನಲೆಯಲ್ಲಿ ಬೆಳಗಾವಿಯ ಮಾರಿಹಾಳ ಠಾಣೆಯ ಪೊಲೀಸರು ಮಾರುತಿ ಆಲಿಯಾಸ್ ತುಮರಿ ದತ್ತು ಚಂದಗಡಕರ, ರಾಹುಲ್ ರಾಜು ನಾಯ್ಡು ಹಾಗೂ ಬಾಳು ಸುರೇಶ್ ಗೊಂಜೇಕರ ಎಂಬುವರನ್ನು ಬಂಧಿಸಿ, ಜೈಲಿಗಟ್ಟಿದ್ದರು.
ಇದೀಗ ಪ್ರಕರಣಕ್ಕೆ ಮತ್ತೊಂದು ತಿರುವು ಪಡೆದುಕೊಂಡಿದೆ. ಯುವಕರನ್ನು ಕರೆಸಿ ಹಲ್ಲೆ ಮಾಡಿಸಿದ್ದಂತ ಬಾಲಕಿಯಿಂದ ನಿರ್ವಾಹಕ ಮಹದೇವ ಹುಕ್ಕೇರಿ ವಿರುದ್ಧ ದೂರು ನೀಡಲಾಗಿದೆ. ಈ ದೂರು ಆಧರಿಸಿ ಬೆಳಗಾವಿಯ ಮಾರಿಹಾಳ ಠಾಣೆಯ ಪೊಲೀಸರು ಕಂಡಕ್ಟರ್ ಮಹದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿರುವುದಾಗಿ ತಿಳಿದು ಬಂದಿದೆ.
ಸಾಲಗಾರರಿಗೆ ಸಿಹಿ ಸುದ್ದಿ: ಫ್ಲೋಟಿಂಗ್ ರೇಟ್ ಮೇಲಿನ ಸಾಲ ಮುಕ್ತಾಯ ಶುಲ್ಕ ತೆಗೆದುಹಾಕಲು RBI ಚಿಂತನೆ
ಬೊಮ್ಮಾಯಿಯವರೇ, ನೀವು ಸಿಎಂ ಆಗಿ ಏನು ಕಡಿದು ಕಟ್ಟೆ ಹಾಕಿದ್ದೀರಿ?: ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ