ಬೆಂಗಳೂರು: ರಾಜ್ಯ ಸರ್ಕಾರದಿಂದ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರಿಗೆ ಗುಂಪು ವಿಮಾ ಯೋಜನೆಗಾಗಿ ಆಕ್ಸಿಸ್ ಬ್ಯಾಂಕ್ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳೋದಕ್ಕೆ ಸಹಿ ಮಾಡಲಾಗಿದೆ. ಈ ಮೂಲಕ ರಾಜ್ಯ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ನೌಕರರಿಗೆ ಸಾಮಾಜಿಕ ಭದ್ರತೆಗಾಗಿ ವಿಮಾ ಯೋಜನೆ ಜಾರಿಗೊಳಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ KSHCOEA ಸಂಘದ ಪ್ರಧಾನ ಕಾರ್ಯದರ್ಶಿ ಗವಿಸಿದ್ಧಪ್ಪ ಉಪ್ಪಾರ ಅವರು, ಶುಕ್ರವಾರದಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಹಾಗೂ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ನ ಜಂಟಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಗುಂಪು ವಿಮೆ ಯೋಜನೆಯ ಜಾರಿ ಮಾಡಲು ಎನ್.ಎಚ್.ಎಂ ಕರ್ನಾಟಕ ಹಾಗೂ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ನಡುವೆ ಒಡಂಬಡಿಕೆಗೆ ಸಹಿ ಮಾಡುವ ಕಾರ್ಯಕ್ರಮವನ್ನು KSHCOEA BMS ಸಂಘದ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಸ್ವಾಮಿ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿ ಆರೋಗ್ಯ ಸೌಧದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದಿದ್ದಾರೆ.
ಈ ಕಾರ್ಯಕ್ರಮವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇವರು ಉದ್ಘಾಟಿಸಿದ್ದು ಹಾಗು ಸಚಿವರ ಸಮ್ಮುಖದಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ಡಾ.ನವೀನ್ ಭಟ್ ವೈ IAS ರವರು ಹಾಗೂ AXIS ಬ್ಯಾಂಕ್ ಮುಖ್ಯಸ್ಥರು ಗುಂಪು ವಿಮೆಯ ಒಡಂಬಡಿಕೆಯನ್ನು ಸಹಿ ಮಾಡಿ ಹಸ್ತಾಂತರ ಮಾಡಿಕೊಳ್ಳಲಾಯಿತು. ಇದೆ ಸಂಧರ್ಭದಲ್ಲಿ ಗುಂಪು ವಿಮೆ ಜಾರಿ ಮಾಡಿರುವದಕ್ಕೆ KSHCOEA ಸಂಘದಿಂದ ಆರೋಗ್ಯ ಸಚಿವರಿಗೆ ಸನ್ಮಾನಿಸಲಾಯಿತು. ಅಲ್ಲದೇ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಈ ವೇಳೆ ಶಿವಕುಮಾರ, ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ನಿಷ್ಮಾ ಡಿ.ಕೋಸ್ಟ್ ಮುಖ್ಯ ಆರ್ಥಿಕ ಅಧಿಕಾರಿಗಳು ಎನ್.ಎಚ್.ಎಂ , ಜಿ.ಹೆಚ್.ನಾಗಹನುಮಯ್ಯ, ಮುಖ್ಯ ಆಡಳಿತ ಅಧಿಕಾರಿಗಳು ಎನ್.ಎಚ್ ಎಂ , KSHCOEA BMS ಸಂಘದ ಗೌರವ ಅಧ್ಯಕ್ಷರಾದ ಆಯನೂರು ಮಂಜುನಾಥ್, ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯ ಕೆ ಎಸ್ ಶಿವರಾಮ್ ಹಾಗೂ ಕಾರ್ಯಾಧ್ಯಕ್ಷರುಗಳಾದ ಗಿರೀಶ್ ಕಡ್ಡಿಪುಡಿ, ವೆಂಕಟೇಶ, ಖಜಾಂಚಿ ರುದ್ರೇಶ್, ಸಂಘಟನಾ ಕಾರ್ಯದರ್ಶಿ ಡಾ.ರವಿ ಹಾಗೂ ಸಂಘದ ಇತರೇ ಪ್ರಮುಖರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಡಾ. ರೂಪ ನಿರೂಪಿಸಿದರು, ಗಿರೀಶ್ ಕಡ್ಡಿಪುಡಿ ಪ್ರಸ್ತಾವಿಕ ಮಾತುಗಳನ್ನಾಡಿದರು.
ವರದಿ: ವಸಂತ ಬಿ ಈಶ್ವರಗೆರೆ
ಬ್ರ್ಯಾಂಡ್ ಅಲ್ಲ, ಬ್ಯಾಡ್ ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ಧಾಳಿ