ಮೈಸೂರು : ಮುಡಾದಲ್ಲಿ ಅಕ್ರಮ ಎಸಗಿದ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದರು. ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಈಗ ಮಾತನಾಡಿದ ಅವರು 50:50 ಅನುಪಾತದಲ್ಲಿ ಪರಿಹಾರ ನೀಡುವ ಕಾನೂನು ಮುಡಾದಲ್ಲಿ ಇದೆ. ಈ ಕಾನೂನು ಬಿಜೆಪಿ ಅವಧಿಯಲ್ಲು ಇತ್ತು. ಹಾಗಾಗಿ ಪಾರ್ವತಮ್ಮಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪರಿಹಾರ ನೀಡಿದ್ದಾರೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು.
50:50 ಅನುಪಾತದಂತೆ ಹಂಚಿಕೆಯಾದ ಸೈಟ್ ಅಕ್ರಮದ ತನಿಖೆ ನಡೆಯುತ್ತಿದೆ ನ್ಯಾ.ಪಿ.ಎನ್ ದೇಸಾಯಿ ಆಯೋಗ ಕೇಸ್ ತನಿಖೆ ನಡೆಸುತ್ತಿದೆ. ತನಿಖೆ ಮುಗಿದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. 50:50 ಅನುಪಾತದಲ್ಲಿ ಪರಿಹಾರ ನೀಡುವ ಕಾನೂನು ಮುಡಾದಲ್ಲಿ ಇದೆ. ಆ ಕಾನೂನು ಇಲ್ಲದೆ ಪರಿಹಾರ ಹೇಗೆ ಕೊಡುವುದು? ಇದು ಬಿಜೆಪಿ ಕಾಲದಲ್ಲಿ ಪರಿಹಾರ ನೀಡಿರುವುದಾಗಿದೆ. ಪಾರ್ವತಮ್ಮ ಅವರಿಗೂ ಬೊಮ್ಮಾಯಿ ಅವರೇ ಪರಿಹಾರ ನೀಡಿದ್ದಾರೆ ಎಂದು ನಗರ ಅಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದರು.
ಮುಡಾ ಕೇಸ್ ನಲ್ಲಿ ಲೋಕಾಯುಕ್ತ ಬಿ ರಿಪೋರ್ಟಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಮಾನ ಮರ್ಯಾದೆ ಇಲ್ಲದವರು ಮಾತ್ರ ವರದಿ ಟೀಕಿಸಬೇಕು. ಬನ್ನಿ ಚಾಮುಂಡೇಶ್ವರಿ ಬಳಿ ಆಣೆ ಮಾಡಿ ಅಂತ ನಾನು ಕರೆದಿದ್ದೆ. ಯಾರು ಆಣೆ ಮಾಡಲು ಬರಲಿಲ್ಲ ಈಗ ಲೋಕಾಯುಕ್ತ ವರದಿ ಬಂದಿದೆ. ರಾಜ್ಯದ ಜನರಿಗೆ ಈಗ ಸತ್ಯ ಗೊತ್ತಾಗಿದೆ. ಸಿದ್ದರಾಮಯ್ಯ ಯಾವತ್ತೂ ಅಕ್ರಮ ಮಾಡಿಲ್ಲ ತಪ್ಪು ಮಾಡಿಲ್ಲ. ಬಿಜೆಪಿಯವರು ಸುಳ್ಳು ಹೇಳಿ ಮೈಸೂರು ಯಾತ್ರೆ ಮಾಡಿದರು. ಪಾರ್ವತಮ್ಮ ಗೆ ಭೂಮಿ ಹೋಗಿತ್ತು ಪರಿಹಾರ ಬಂದಿದೆ ಅಷ್ಟೇ ಎಂದು ಭೈರತಿ ಸುರೇಶ್ ತಿಳಿಸಿದರು.