ರಾಯಚೂರು : ಬೊಲೆರೋ ವಾಹನವೊಂದು ಪಲ್ಟಿಯಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಚಂದ್ರಬಂಡ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.
ಬೊಲೆರೋ ವಾಹನದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಹೊನ್ನಪ್ಪ ಎಂದಿನಂತೆ ಶಾಲೆಗೆ ತೆರಳುತ್ತಿದ್ದ. ಮೃತ ವಿದ್ಯಾರ್ಥಿ ಗಣಮೂರು ಗ್ರಾಮದ ನಿವಾಸಿಯಾಗಿದ್ದಾನೆ. ಚಂದ್ರಬಂಡದ ಬಳಿ ಬೊಲೆರೋ ವಾಹನದಲ್ಲಿ ಬರುವಾಗ ಪಲ್ಟಿಯಾಗಿ ವಿದ್ಯಾರ್ಥಿ ಹೊನ್ನಪ್ಪ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.