ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಹಾಡಹಗಲೇ ಭೀಕರವಾದ ಕೊಲೆ ನಡೆದಿದ್ದು, ಕೇವಲ ಮೊಬೈಲ್ಗಾಗಿ ಚಂದ್ರಪ್ಪ ಎನ್ನುವ ವ್ಯಕ್ತಿಯನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ ಬೆಂಗಳೂರಿನ ಮೆಜೆಸ್ಟಿಕ್ ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಈ ಕೊಳೆ ನಡೆದಿದೆ.
ಬೆಂಗಳೂರಿನ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಂದ್ರಪ್ಪ ಎನ್ನುವ ವ್ಯಕ್ತಿಯ ಬಳಿ ಮೊಬೈಲ್ ಕಿತ್ತುಕೊಳ್ಳಲು ಇಬ್ಬರು ವ್ಯಕ್ತಿಗಳು ಮುಂದಾಗಿದ್ದಾರೆ.ಈ ವೇಳೆ ಚಂದ್ರಪ್ಪ ಎನ್ನುವ ವ್ಯಕ್ತಿ ವಿರೋಧ ವ್ಯಕ್ತಪಡಿಸಿದಾಗ ವಿಜಯ ಮತ್ತು ಆತನ ಗ್ಯಾಂಗ್ ಚಂದ್ರಪ್ಪನ ಮೇಲೆ ಚಾಕು ಇರಿದು ಭೀಕರವಾಗಿ ಹಲ್ಲೆ ಮಾಡಿದ್ದಾರೆ.
ಮೃತ ಚಂದ್ರಪ್ಪ ಕಾಮಾಕ್ಷಿಪಾಳ್ಯ ನಿವಾಸಿಯಾಗಿದ್ದು ಟೆಲರಿಂಗ್ ಕೆಲಸ ಮಾಡುತ್ತಿದ್ದ ಅಲ್ಲದೆ ಚಂದ್ರಪ್ಪ ಮದ್ಯ ವ್ಯಸನಿ ಕೂಡ ಆಗಿದ್ದ. ಚಂದ್ರಪ್ಪನಿಗೆ ಚಾಕು ಇರಿದ ಪರಿಣಾಮ ರಕ್ತದ ಮಡಿವಿನಲ್ಲಿ ಬಿದ್ದಿದ್ದಾನೆ.ಪೊಲೀಸರು ಸದ್ಯ ವಿಜಯನನ್ನು ಅರೆಸ್ಟ್ ಮಾಡಿದ್ದು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.ಘಟನೆ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.