ಮೊಬೈಲ್ ಫೋನ್ ಗಳ ಆಗಮನದಿಂದ ನೆಟ್ ಬ್ಯಾಂಕಿಂಗ್ ಸೇರಿದಂತೆ ಇತರ ಅನೇಕ ಕಾರ್ಯಗಳನ್ನು ಮೊದಲಿಗಿಂತ ವೇಗವಾಗಿ ಮಾಡಲಾಗುತ್ತದೆ. ಆದರೆ ಮೊಬೈಲ್ ನಲ್ಲಿ ಕೆಲವು ಸೂಕ್ತವಲ್ಲದ ಆ್ಯಪ್ ಗಳಿವೆ. ಈ ಅಪ್ಲಿಕೇಶನ್ ಗಳು ಡೌನ್ ಲೋಡ್ ಮಾಡಿದ್ರೆ ನೀವು ಕಷ್ಟಪಟ್ಟು ಸಂಪಾದಿಸಿದ ಹಣ ಕೆಲವೇ ಸೆಕೆಂಡ್ ಗಳಲ್ಲಿ ಖಾಲಿ ಆಗಬಹುದು.
ಈ ಆ್ಯಪ್ ಗಳನ್ನು ಅಪ್ಪಿ-ತಪ್ಪಿಯೂ ಡೌನ್ ಲೋಡ್ ಮಾಡಬೇಡಿ
Flash Lite ಆ್ಯಪ್
ಅನೇಕ ಜನರು ಮೊಬೈಲ್ ನಲ್ಲಿ ಫ್ಲ್ಯಾಶ್ ಲೈಟ್ ಅಪ್ಲಿಕೇಶನ್ ಅನ್ನು ಪ್ರತ್ಯೇಕವಾಗಿ ಡೌನ್ಲೋಡ್ ಮಾಡುತ್ತಾರೆ. ಆದರೆ ಈ ಅಪ್ಲಿಕೇಶನ್ ನಿಮ್ಮ ಅನೇಕ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತದೆ ಮತ್ತು ನಿಮ್ಮನ್ನು ಮೋಸಗೊಳಿಸುತ್ತದೆ ಎಂದು ನಿಮಗೆ ತಿಳಿದಿಲ್ಲದಿರಬಹುದು. ಆದ್ದರಿಂದ ಈ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ.
ಕ್ಲೀನರ್ ಅಪ್ಲಿಕೇಶನ್
ಮೊಬೈಲ್ ನಿಂದ ಕ್ಯಾಶ್ ಅಥವಾ ಜಂಕ್ ಫೈಲ್ ಗಳನ್ನು ತೆಗೆದುಹಾಕಲು, ಜನರು ಕ್ಲೀನರ್ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಆದರೆ ಇದನ್ನು ಎಂದಿಗೂ ಡೌನ್ ಲೋಡ್ ಮಾಡಿಕೊಳ್ಳಬೇಡಿ ಏಕೆಂದರೆ ಈ ಅಪ್ಲಿಕೇಶನ್ ಮೊದಲು ನಿಮಗೆ ಅನೇಕ ಅನುಮತಿಗಳನ್ನು ಕೇಳುತ್ತದೆ ಮತ್ತು ನಂತರ ನಿಮ್ಮ ಡೇಟಾವನ್ನು ಕದಿಯಬಹುದು.
ಕೀಬೋರ್ಡ್ ಅಪ್ಲಿಕೇಶನ್
ಮೊಬೈಲ್ ನಲ್ಲಿ ಟೈಪ್ ಮಾಡಲು ಕೀಬೋರ್ಡ್ ಇದೆ, ಆದರೆ ಜನರು ಬೇರೆ ಭಾಷೆಯಲ್ಲಿ ಬರೆಯಲು ಪ್ರತ್ಯೇಕ ಕೀಬೋರ್ಡ್ ಅಪ್ಲಿಕೇಷನ್ ಡೌನ್ ಲೋಡ್ ಮಾಡುತ್ತಾರೆ. ಆದರೆ ಈ ಅಪ್ಲಿಕೇಶನ್ಗಳಲ್ಲಿ ಅನೇಕವು ನಕಲಿ, ಇದು ಟೈಪಿಂಗ್ ಸಮಯದಲ್ಲಿ ನಿಮ್ಮ ಪಾಸ್ವರ್ಡ್ ಅನ್ನು ಕದಿಯಬಹುದು. ಆದ್ದರಿಂದ ಈ ಅಪ್ಲಿಕೇಶನ್ ಗಳಿಂದ ದೂರವಿರಿ.
ಉಚಿತ ಆಂಟಿ-ವೈರಸ್ ಅಪ್ಲಿಕೇಶನ್
ಆಂಟಿವೈರಸ್ ವಿಷಯಕ್ಕೆ ಬಂದಾಗಲೆಲ್ಲಾ, ಜನರು ಅನೇಕ ಉಚಿತ ಆಂಟಿ-ವೈರಸ್ ಅಪ್ಲಿಕೇಶನ್ಗಳನ್ನು ಪಡೆಯುತ್ತಾರೆ, ಆದರೆ ನೀವು ಈ ಅಪ್ಲಿಕೇಶನ್ಗಳನ್ನು ನಿಮ್ಮ ಮೊಬೈಲ್ನಲ್ಲಿ ಡೌನ್ ಲೋಡ್ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಈ ಅಪ್ಲೇಷನ್ ಮೂಲಕ ನಿಮ್ಮ ವೈಯಕ್ತಿಕ ಡೇಟಾವನ್ನು ಸಹ ಕದಿಯುವ ಸಾಧ್ಯತೆ ಇದೆ.