ಬೆಂಗಳೂರು: ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ಪೂರ್ವ ಕರಾವಳಿ ರೈಲ್ವೆಯು ಭುವನೇಶ್ವರ ಮತ್ತು ಯಶವಂತಪುರ ನಿಲ್ದಾಣಗಳ ನಡುವಿನ ಸಾಪ್ತಾಹಿಕ ವಿಶೇಷ ರೈಲು ಸೇವೆಗಳನ್ನು ಹೆಚ್ಚುವರಿ 9 ಟ್ರಿಪ್ಗಳಿಗೆ ವಿಸ್ತರಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 02811 ಭುವನೇಶ್ವರ-ಯಶವಂತಪುರ ಸಾಪ್ತಾಹಿಕ ವಿಶೇಷ ರೈಲು ಮಾರ್ಚ್ 1, 8, 15, 22, 29; ಏಪ್ರಿಲ್ 5, 12, 19 ಮತ್ತು 26, 2025 ರಂದು ಭುವನೇಶ್ವರ ನಿಲ್ದಾಣದಿಂದ 19:15 ಗಂಟೆಗೆ ಹೊರಟು, ಮೂರನೇ ದಿನ 00:15 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.
ಅದೇ ರೀತಿ ರೈಲು ಸಂಖ್ಯೆ 02812 ಯಶವಂತಪುರ-ಭುವನೇಶ್ವರ ಸಾಪ್ತಾಹಿಕ ವಿಶೇಷ ರೈಲು ಮಾರ್ಚ್ 3, 10, 17, 24, 31; ಏಪ್ರಿಲ್ 7, 14, 21 ಮತ್ತು 28, 2025 ರಂದು ಯಶವಂತಪುರದಿಂದ 04:30 ಗಂಟೆಗೆ ಹೊರಟು, ಮರುದಿನ 06:00 ಗಂಟೆಗೆ ಭುವನೇಶ್ವರವನ್ನು ತಲುಪಲಿದೆ.
ಈ ರೈಲುಗಳ ಪರಿಷ್ಕೃತ ಸಮಯಗಳ ಮಾಹಿತಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು.
BREAKING: ವಿಧಾನಸೌಧಕ್ಕೆ ‘ಟೊಯೋಟಾ ವೆಲ್ ಪೈರ್’ ಕಾರಿನಲ್ಲೇ ಆಗಮಿಸಿದ ಸಿಎಂ ಸಿದ್ಧರಾಮಯ್ಯ | CM Siddaramaiah
ರಾಜ್ಯದಲ್ಲಿ ಫೆಬ್ರವರಿಯಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಲು, ಏಪ್ರಿಲ್-ಮೇನಲ್ಲಿ ಉತ್ತಮ ಮಳೆ ಸಾಧ್ಯತೆ