ಬೆಂಗಳೂರು : ಬೆಂಗಳೂರಿನಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಸ್ನೇಹಿತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಡುಗೋಡಿಯ ಬೆಳ್ತೂರು ಎಂಬಲ್ಲಿ ನಡೆದಿದೆ.
ಅಕ್ರಮ ಸಂಬಂಧಕ್ಕೆ ಮಹಿಳೆಯ ಸ್ನೇಹಿತನ ಬರ್ಬರ ಹತ್ಯೆಗೈಯ್ಯಲಾಗಿದೆ. ಬೆಂಗಳೂರಿನ ಕಾಡುಗೋಡಿಯ ಬೆಳ್ತೂರು ಕಾಲೋನಿಯಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕಿಶೋರ್ ಎನ್ನುವ ವ್ಯಕ್ತಿಯನ್ನು ಬರಬರವಾಗಿ ಕೊಲೆ ಮಾಡಲಾಗಿದೆ.
ಇನ್ನು ಮಹಿಳೆ ಅರುಂಧತಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಒಟ್ಟಿಗೆ ಇರುವಾಗ ಮಹಿಳೆಯ ಸಹೋದರ, ಗಂಡ ಹಾಗೂ ಮಗಳಿಂದ ಈ ಒಂದು ಕೃತ್ಯ ಎಸಗಿದ್ದು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.