ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಮಹಿಳೆಯ ಮೇಲೆ ಕೆಲವು ದುಷ್ಕರ್ಮಿಗಳು ರಾಕ್ಷಸಿಯ ವರ್ತನೆ ತೋರಿದ್ದು, ಮಹಿಳೆಯನ್ನು ಕೋಣೆಯಲ್ಲಿ ಕೂಡಿಹಾಕಿ ರಾತ್ರಿ ಇಡಿ ಚಿತ್ರಹಿಂಸೆ ನೀಡಿ ಕಣ್ಣುಗುಡ್ಡೆ ಕಿತ್ತು ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಗನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ಕಣ್ಣು ಗುಡ್ಡೆ ಕಿತ್ತು ಬರುವಂತೆ ಮಹಿಳೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. ಕಿಡ್ನ್ಯಾಪ್ ಮಾಡಿ ತೋಟದ ಮನೆಯಲ್ಲಿ ಕೂಡಿಹಾಕಿ ಭೀಕರವಾಗಿ ಹಲ್ಲೆ ನಡೆಸಲಾಗಿದೆ ಅನ್ನುವ ಆರೋಪ ಹೇಳಿ ಬಂದಿದೆ. ತೋಟದ ಮನೆಯಲ್ಲಿ ಕೂಡಿಹಾಕಿ ಮಹಿಳೆಗೆ ರಾತ್ರಿ ಇಡಿ ಹಿಂಸೆ ನೀಡಿದ್ದಾರೆ. ಮುಖದಲ್ಲಿ ರಕ್ತ ಸುರಿಯುವಂತೆ ದುಷ್ಕರ್ಮಿಗಳು ಮನಬಂದಂತೆ ಥಳಿಸಿದ್ದಾರೆ.
ಬ್ಯಾಟ್, ರಾಡ್ ಗಳಿಂದ ಮುಖ ಮೋತಿಯನ್ನು ನೋಡದೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಜಗನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಗಂಗರಾಜು ಎರಡನೇ ಪತ್ನಿ ಸಂಗೀತ ಮೇಲೆ ಈ ಒಂದು ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಮೊದಲ ಪತ್ನಿಯ ಕಡೆಯವರೇ ಈ ಒಂದು ಭೀಕರವಾದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೆ ಒಳಗಾದ ಸಂಗೀತ ಸಹೋದರಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮೂರು ತಿಂಗಳ ಹಿಂದೆ ಗಂಗರಾಜು ಸಂಗೀತ ಅವರನ್ನು ಎರಡನೇ ಮದುವೆ ಆಗಿದ್ದರು. ಗಂಗರಾಜು ಸಂಬಂಧಿ ರಾಜಮ್ಮ ಕಡೆಯವರಿಂದ ಸಂಗೀತ ಮೇಲೆ ಹಲ್ಲೆ ನಡೆಸಲಾಗಿದೆ.ನಿನ್ನೆ ರಾತ್ರಿ ಸಂಗೀತ ತಂದೆ ಹಾಗೂ ಸಹೋದರಿಯರ ಜೊತೆಗೆ ಕೂಡ ಈ ಒಂದು ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಸಂಗೀತ ಸಹೋದರಿ ಹಂಸ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿದು ಗಂಗರಾಜು ಮತ್ತು ಸಂಗೀತಾ ಗ್ರಾಮಕ್ಕೆ ಬಂದಿದ್ದಾರೆ. ಗ್ರಾಮಕ್ಕೆ ಬಂದಿದ್ದ ಸಂಗೀತ ಮೇಲು ದಾಳಿ ನಡೆದಿತ್ತು. ಹೆಂಡತಿ ಇದ್ದರೂ ಎರಡನೇ ಮದುವೆಯಾಗಿದ್ದ ಗಂಗರಾಜು 9 ವರ್ಷಗಳಿಂದ ಸಂಗೀತ ಜೊತೆ ಗಂಗರಾಜು ಸಂಬಂಧ ಇತ್ತು. ಈ ಹಿನ್ನೆಲೆಯಲ್ಲಿ ಮೊದಲ ಪತ್ನಿಯ ಕಡೆಯವರು ಸಂಗೀತಾಳನ್ನು ಕಿಡ್ನಾಪ್ ಮಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.