ಮೈಸೂರು : ಮುಡಾ ಕೇಸ್ ಗೆ ಸಂಬಂಧಸಿದಂತೆ ಲೋಕಾಯುಕ್ತ ಅಧಿಕಾರಿಗಳು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರಿಗೆ ಕ್ಲೀನ್ ಚಿಟ್ ನೀಡಿದ್ದು, ಬಿ ರಿಪೋರ್ಟ್ ಸಲ್ಲಿಸುವುದಾಗಿ ಮಾಹಿತಿ ಬಂದಿದೆ. ಈ ವಿಚಾರವಾಗಿ ದೂರುದಾರ ಸ್ನೇಹಮಯಿ ಕೃಷ್ಟ ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯಗೆ ಶಿಕ್ಷೆ ಕೊಡಿಸದಿದ್ದರೆ ನಾನು ಸ್ನೇಹಮಯಿ ಕೃಷ್ಣನೇ ಅಲ್ಲ ಎಂದು ಶಪಥ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಶಿಕ್ಷೆ ಕೊಡಿಸದೆ ಇದ್ದರೆ ನಾನು ಸ್ನೇಹಮಯಿ ಕೃಷ್ಣನೇ ಅಲ್ಲ ಎಂದು ದೂರುದಾರ ಸ್ನೇಹದ ಕೃಷ್ಣ ಶಪಥ ಮಾಡಿದ್ದಾರೆ. ಲೋಕಾಯುಕ್ತದ ಮೇಲಿನ ಅನುಮಾನ ಹೆಚ್ಚಾಗಿದೆ. ಲೋಕಾಯುಕ್ತ ಅಧಿಕಾರಿಗಳು ಆತ್ಮಸಾಕ್ಷಿ ಮಾರಿಕೊಂಡಿದ್ದಾರೆ. ನಾನು ಸಾಕಷ್ಟು ಸಾಕ್ಷಿಗಳನ್ನು ಕೊಟ್ಟಿದ್ದೇನೆ ನಾಲ್ವರ ವಿರುದ್ಧದ ಆರೋಪದಲ್ಲಿ ಸಾಕ್ಷಿಗಳ ಕೊರತೆ ಇದೆ. ನೀವು ಕೋರ್ಟ್ ಅಲ್ಲಿ ಪ್ರಶಂಸೆ ಅಂತ ನೋಟಿಸ್ ಕೊಟ್ಟಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆಕ್ರೋಶ ಹೊರ ಹಾಕಿದ್ದಾರೆ.
ತನಿಖೆ ಇನ್ನು ಬಾಕಿರುವಾಗಲೇ ಮಧ್ಯಂತರ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ತನಿಖೆ ಮುಕ್ತಾಯಗೊಳಿಸದೆ ಮಧ್ಯಂತರ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಲೋಕಾಯುಕ್ತ ಪೊಲೀಸರಿಗೆ ನಾಚಿಕೆ ಆಗಬೇಕು ಎಂದು ಸ್ನೇಹಮಯಿಕೃಷ್ಣ ಕಿಡಿ ಕರಿದ್ದಾರೆ.
ಇದು ತನಿಖೆಗೆ ಅರ್ಹವಲ್ಲದ ಪ್ರಕರಣವಾಗಿದೆ ಎಂದು ಲೋಕಾಯುಕ್ತ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆಗೆ ಅರ್ಹವಲ್ಲ ಎಂದು ಅಭಿಪ್ರಾಯ ಪಟ್ಟಿದ್ದು ಲೋಕಾಯುಕ್ತ ಪೊಲೀಸರಿಂದ ದೂರುದಾರ ಸ್ನೇಹ ಮೈಕೃಷ್ಣಗೆ ನೋಟಿಸ್ ನೀಡಲಾಗಿದೆ. ಮೈಸೂರು ಲೋಕಾಯುಕ್ತದಲ್ಲಿ ನೀವು ಮೊಕದ್ದಮೆ ದಾಖಲೆ ಸಲ್ಲಿಸಿರುತ್ತಿರಿ. ಆದರೆ ನೀವು ದಾಖಲಿಸಿರುವ ಕೇಸ್ ಸಿವಿಲ್ ಸ್ವರೂಪ ಎಂದು ತನಿಖೆ ನಡೆಸಲು ತಕ್ಕುದಲ್ಲವೆಂದು ಸಂಗತಿ ಅಥವಾ ಕಾನೂನಿನ ತಪ್ಪು ತಿಳುವಳಿಕೆ ಎಂದು ಕ್ರಮ ಜರುಗಿ ತಕ್ಕದ್ದಲ್ಲವೆಂದು ಲೋಕಾಯುಕ್ತ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರ ಅಡಿಯಲ್ಲಿ ತನಿಖೆ ನಡೆಸಿದ ವಜಾ ಮಾಡಿದ ಮೊಕದ್ದಮೆಗಳು ಬರುತ್ತವೆ. ಸಾಕ್ಷಾಧಾರಗಳ ಕೊರತೆ ಕಂಡುಬಂದಿದ್ದು ವರದಿಯನ್ನು ವಿರೋಧಿಸುವುದಿದ್ದರೆ ನೋಟಿಸ್ ತಲುಪಿದ ಒಂದು ವಾರದೊಳಗೆ ಕೋರ್ಟ್ ಮೊರೆ ಹೋಗಬಹುದು. ಪ್ರಕರಣದ ಆರೋಪಿ ಒಂದರಿಂದ ಆರೋಪಿ ನಾಲ್ಕರವರೆಗಿನ ವಿರುದ್ಧದ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀದಾಗಿರುವುದಿಲ್ಲ. ಅಂತಿಮ ವರದಿಯನ್ನ ಘನ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 2016 ರಿಂದ 2024ರ ವರೆಗೆ 50 : 50 ಅನುಪಾತದಲ್ಲಿ ಪರಿಹಾರಾತ್ಮಕ ನಿವೇಶನ ನೀಡಿರುವ ಆರೋಪಗಳಿವೆ.