Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಖಮೇನಿ ಹತ್ಯೆ: ‘ಖಂಡನೆಗಿಂತ ಸಂತಾಪ ಸೂಚಿಸುವುದು ಮುಖ್ಯ’; ಕೇಂದ್ರದ ಮೌನವನ್ನು ಸಮರ್ಥಿಸಿಕೊಂಡ ಶಶಿ ತರೂರ್!

20/03/2026 4:14 PM

ಸಿಂಧನೂರಿನ ‘ಹಂಚಿನಾಳ ಕ್ಯಾಂಪ್‌’ನಲ್ಲಿ ನೂತನ ‘ಜೋಳ ಖರೀದಿ ಕೇಂದ್ರ’ಕ್ಕೆ ಚಾಲನೆ

20/03/2026 4:14 PM

BREAKING : ಮಧ್ಯಪ್ರಾಚ್ಯ ಯುದ್ಧದ ನಡುವೆ ‘LPG’ ಪ್ಯಾನಿಕ್ ಬುಕಿಂಗ್ ಕಮ್ಮಿಯಾಗಿದೆ ; ಕೇಂದ್ರ ಸರ್ಕಾರ!

20/03/2026 4:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಫೆ. 25ರಂದು ಕೇಂದ್ರ ಜಲಶಕ್ತಿ ಸಚಿವರ ಭೇಟಿ: ಡಿಸಿಎಂ ಡಿ.ಕೆ. ಶಿವಕುಮಾರ್
KARNATAKA

ಫೆ. 25ರಂದು ಕೇಂದ್ರ ಜಲಶಕ್ತಿ ಸಚಿವರ ಭೇಟಿ: ಡಿಸಿಎಂ ಡಿ.ಕೆ. ಶಿವಕುಮಾರ್

By kannadanewsnow0919/02/2025 2:01 PM

ರಾಜಸ್ಥಾನ :”ಕೇಂದ್ರ ಜಲಶಕ್ತಿ ಸಚಿವರು ಇದೇ ಫೆ. 25ರಂದು ಭೇಟಿಗೆ ಸಮಯಾವಕಾಶ ನೀಡಿದ್ದು, ರಾಜ್ಯದ ನೀರಾವರಿ ಯೋಜನೆಗಳ ಪ್ರಸ್ತಾವನೆ ಸಲ್ಲಿಸುತ್ತೇನೆ. ನಮ್ಮ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ವಿಶ್ವಾಸವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಉದಯಪುರದಲ್ಲಿ ಕೆಂದ್ರ ಜಲಶಕ್ತಿ ಸಚಿವಾಲಯ ನಡೆಸುತ್ತಿರುವ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಕೇಂದ್ರ ಸಚಿವರನ್ನು ಭೇಟಿ ಮಾಡಿ, ಈ ಹಿಂದೆ ಘೋಷಿಸಲಾಗಿರುವ ಅನುದಾನ ಹಾಗೂ ಮಹದಾಯಿ, ಮೇಕೆದಾಟು ಹಾಗೂ ಕೃಷ್ಮಾ ಮೇಲ್ದಂಡೆ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.

“ಈ ಸಮ್ಮೇಳನ ಎಲ್ಲಾ ರಾಜ್ಯಗಳ ಸಚಿವರುಗಳನ್ನು ಒಗಗೂಡಿಸಿದೆ. ಎಲ್ಲಾ ರಾಜ್ಯಗಳ ಅತ್ಯುತ್ತಮ ನೀರಾವರಿ ವ್ಯವಸ್ಥೆಗಳ ಪರಿಚಯವಾಗುತ್ತಿದೆ. ಇದರ ಜತೆಗೆ ನಮ್ಮಲ್ಲಿರುವ ಸಮಸ್ಯೆಗಳನ್ನು ಅರಿತು, ಅವುಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಮುಂದೆ ಇಡಬಹುದಾಗಿದೆ. ನೀರನ್ನು ಸಂರಕ್ಷಿಸಬೇಕು, ಮರುಬಳಕೆ ಮಾಡಬೇಕು. ಎಂಬುದು ಈ ಸಮ್ಮೇಳನದ ಉದ್ದೇಶ. ನಮ್ಮ ಯೋಜನೆಗಳನ್ನು ರಾಜಕೀಯ ಉದ್ದೇಶದಿಂದ ನೋಡಬೇಡಿ, ಸಮಸ್ಯೆಗಳನ್ನು ಬಗೆಹರಿಸಬೇಕು. ರಾಜ್ಯಗಳ ನಡುವಣ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕು” ಎಂದು ತಿಳಿಸಿದರು.

“ಈ ಸಮ್ಮೇಳನದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಸಚಿವರುಗಳ ಜತೆ ಚರ್ಚೆ ಮಾಡಿದ್ದು, ತುಂಗಭದ್ರಾ ನದಿಯ 30 ಟಿಎಂಸಿ ನೀರನ್ನು ಉಳಿಸಿ, ಸದ್ಬಳಕೆ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಲು ವಿಜಯವಾಡಕ್ಕೆ ಹೋಗಿ ಮತ್ತೊಮ್ಮ ಚರ್ಚೆ ಮಾಡುತ್ತೇನೆ. ಇದಕ್ಕಾಗಿ ಮೂರು ರಾಜ್ಯಗಳ ಸೇರಿ ಕಾರ್ಯತಂತ್ರ ರೂಪಿಸಬೇಕಿದೆ” ಎಂದರು.

“ನೀರಾವರಿಯು ದೇಶದ ಪ್ರಮುಖ ಕ್ಷೇತ್ರವಾಗಿದ್ದು, ರೈತರು, ಕೈಗಾರಿಕೆಗಳು, ಕುಡಿಯುವ ನೀರು ಹಾಗೂ ನಗರೀಕರಣಕ್ಕೆ ನೀರಾವರಿ ಯೋಜನೆ ಅಗತ್ಯವಾಗಿದೆ. ಹೀಗಾಗಿ ಜಲಶಕ್ತಿ ಸಚಿವಾಲಯ ದೇಶದಲ್ಲಿ ಸ್ಪಷ್ಟವಾದ ನೀಲನಕ್ಷೆ ಹಾಗೂ ಮಾರ್ಗಸೂಚಿ ರೂಪಿಸಬೇಕಿದೆ. ಜತೆಗೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು” ಎಂದು ಅಭಿಪ್ರಾಯಪಟ್ಟರು.

ಪ್ರಯಾಗರಾಜ್ ಸಂಗಮದ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂಬ ವರದಿ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ಮಾತ್ರ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.

BREAKING:ಪರ್ವೇಶ್ ವರ್ಮಾ ದೆಹಲಿ ಸಿಎಂ ಆಗ್ತಾರಾ? ಬಿಜೆಪಿ ಅಭ್ಯರ್ಥಿ ಯಾರು | Delhi CM Announcement

BREAKING NEWS : ‘ಅನ್ನಭಾಗ್ಯ’ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ಕೊಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ

Share. Facebook Twitter LinkedIn WhatsApp Email

Related Posts

ಸಿಂಧನೂರಿನ ‘ಹಂಚಿನಾಳ ಕ್ಯಾಂಪ್‌’ನಲ್ಲಿ ನೂತನ ‘ಜೋಳ ಖರೀದಿ ಕೇಂದ್ರ’ಕ್ಕೆ ಚಾಲನೆ

20/03/2026 4:14 PM1 Min Read

ರೈಲ್ವೇ ಪ್ರಯಾಣಿಕರಿಗೆ ಬಂಪರ್ ಕೊಡುಗೆ: ಕರ್ನಾಟಕದ 19 ವಿಶೇಷ ರೈಲುಗಳು ಇನ್ಮುಂದೆ ‘ಖಾಯಂ’!

20/03/2026 3:40 PM2 Mins Read

BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು

20/03/2026 3:20 PM2 Mins Read
Recent News

ಖಮೇನಿ ಹತ್ಯೆ: ‘ಖಂಡನೆಗಿಂತ ಸಂತಾಪ ಸೂಚಿಸುವುದು ಮುಖ್ಯ’; ಕೇಂದ್ರದ ಮೌನವನ್ನು ಸಮರ್ಥಿಸಿಕೊಂಡ ಶಶಿ ತರೂರ್!

20/03/2026 4:14 PM

ಸಿಂಧನೂರಿನ ‘ಹಂಚಿನಾಳ ಕ್ಯಾಂಪ್‌’ನಲ್ಲಿ ನೂತನ ‘ಜೋಳ ಖರೀದಿ ಕೇಂದ್ರ’ಕ್ಕೆ ಚಾಲನೆ

20/03/2026 4:14 PM

BREAKING : ಮಧ್ಯಪ್ರಾಚ್ಯ ಯುದ್ಧದ ನಡುವೆ ‘LPG’ ಪ್ಯಾನಿಕ್ ಬುಕಿಂಗ್ ಕಮ್ಮಿಯಾಗಿದೆ ; ಕೇಂದ್ರ ಸರ್ಕಾರ!

20/03/2026 4:05 PM

ದಳಪತಿ ವಿಜಯ್ ಕೊನೆಯ ಚಿತ್ರ ‘ಜನ ನಾಯಕನ್’ಗೆ ಹೊಸ ವಿಘ್ನ: ಸಿನಿಮಾದ ಭವಿಷ್ಯ ಈಗ ಚುನಾವಣಾ ಆಯೋಗದ ಕೈಯಲ್ಲಿ!

20/03/2026 4:04 PM
State News
KARNATAKA

ಸಿಂಧನೂರಿನ ‘ಹಂಚಿನಾಳ ಕ್ಯಾಂಪ್‌’ನಲ್ಲಿ ನೂತನ ‘ಜೋಳ ಖರೀದಿ ಕೇಂದ್ರ’ಕ್ಕೆ ಚಾಲನೆ

By kannadanewsnow0920/03/2026 4:14 PM KARNATAKA 1 Min Read

ಸಿಂಧನೂರು: ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಬೆಂಬಲ ಬೆಲೆ…

ರೈಲ್ವೇ ಪ್ರಯಾಣಿಕರಿಗೆ ಬಂಪರ್ ಕೊಡುಗೆ: ಕರ್ನಾಟಕದ 19 ವಿಶೇಷ ರೈಲುಗಳು ಇನ್ಮುಂದೆ ‘ಖಾಯಂ’!

20/03/2026 3:40 PM

BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು

20/03/2026 3:20 PM

ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಯ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲುವು: ಬಿ.ವೈ.ವಿಜಯೇಂದ್ರ

20/03/2026 2:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.