ಬೆಂಗಳೂರು : ಅನ್ನಭಾಗ್ಯ ಯೋಜನೆಯ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಇನ್ನು ಫಾಲಾನುಭವಿಗಳ ಖಾತೆಗೆ ಜಮೆ ಆಗದೆ ಇರುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತ ಪತ್ರ ಹೊರಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಅಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ನಮ್ಮ ವಿರೋಧವಿಲ್ಲ. ಗ್ಯಾರಂಟಿ ಯೋಜನೆ ಬಗ್ಗೆ ಹೊಸ ಕಂಡೀಶನ್ ಹಾಕಿದ್ವಿ. ಎಂಪಿ ಚುನಾವಣೆಯ ಮತದಾನದ ಮೂರು ದಿನಗಳ ಮುನ್ನವೇ ಹಣ ಜಮೆಯಾಗಿದೆ. ಬೈ ಎಲೆಕ್ಷನ್ ಮತದಾನಕ್ಕೂ ಮುನ್ನವೇ ಗ್ಯಾರಂಟಿ ಹಣ ತಲುಪುತ್ತದೆ. ಮುಂದಿನ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗೂ ಹೀಗೆ ಮಾಡುತ್ತಾರೆ. ರಾಜ್ಯದ ಜನರು ರೈತರು ಬಡವರು ಭಿಕ್ಷುಕರ? ಎಂದು ರಾಜ್ಯ ಸರ್ಕಾರದ ವಿರುದ್ಧ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಕೆಪಿಸಿಸಿ ಅಧ್ಯಕ್ಷರು ಸಿಎಂ ಹುದ್ದೆ ವಿಚಾರವಾಗಿ ಬಡಿದಾಟ ನಡೆಯುತ್ತಿದೆ ಕೆಲ ನಾಯಕರು ಅಧ್ಯಕ್ಷರ ಬದಲಾವಣೆಗೆ ಬಗ್ಗೆ ಮಾತನಾಡಿದ್ದಾರೆ. ಮತ್ತೊಂದು ಬಡ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಸಿಎಂ ಹುದ್ದೆ ಕೆಪಿಸಿಸಿ ಹುದ್ದೆ ವಿಚಾರದಲ್ಲಿ ಒಳ ಜಗಳ ಇದೆ. ಹೀಗಾಗಿ ರಾಜ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ. ರಾಜಕಾರಣದಲ್ಲಿ ತ್ರಿಪುರ ಬೆಳವಣಿಗೆ ಆಗುವ ಸಾಧ್ಯತೆ ಇದೆ ಎಂದು ಬಿ.ವೈ ವಿಜಯೇಂದ್ರ ಹೇಳಿದರು.