ಮೈಸೂರು : ಕಳೆದ ಕೆಲವು ದಿನಗಳ ಹಿಂದೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಮುಸ್ಲಿಂ ಮುಖಂಡ ಮುಸ್ತಾಕ್ ಪ್ರಚೋದನಾಕಾರಿ ಭಾಷಣ ಕೇಳಿ ಕೆಲವರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಪೊಲೀಸರು ಮುಸ್ಲಿಂ ಮುಖಂಡ ಮುಸ್ತಾಕ್ ಅನ್ನು ಬಂಧಿಸಿಲ್ಲ.
ಹೌದು ಉದಯಗಿರಿ ಠಾಣೆಯ ಮೇಲೆ ಕಲ್ಲು ತೂರಾಟ ಘಟನೆ ನಡೆದು ಇಷ್ಟು ದಿನಗಳಾದರೂ ಕೂಡ ಪೊಲೀಸರು ಮುಸ್ತಾಕ್ಕನ್ನು ಅರೆಸ್ಟ್ ಯಾಕೆ ಮಾಡಿಲ್ಲ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಈತ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ನಿವಾಸಿ ಎಂದು ತಿಳಿದುಬಂದಿದೆ. ಮೈಸೂರಿನಲ್ಲಿ ಮುಸ್ತಾಕ್ ಮಕ್ಬೋಲಿ, ಬಾಡಿಗೆ ಮನೆಯಲ್ಲಿ ನೆಲೆಸಿದ್ದಾನೆ. ಮೈಸೂರಿನ ರಾಜೀವ ನಗರದ ಶಿವಣ್ಣವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಸದ್ಯ ಮುಸ್ತಾಕ್ ಮೈಸೂರಿನ ಸಾಡೇ ರಸ್ತೆ ದರ್ಗಾ ಮಸೀದಿಯಲ್ಲಿ ಇದ್ದಾನೆ ಎಂಬ ಮಾಹಿತಿ ಇದೆ. ಕಲ್ಯಾಣಗಿರಿ ನಾಲ್ಕನೇ ಹಂತದಲ್ಲಿ ಯಾರ ಮಸೀದಿ ಪಕ್ಕದಲ್ಲಿ ಇದ್ದು ಕಷ್ಟ ಎಂದು ಬಂದವರಿಗೆ ನಿಂಬೆಹಣ್ಣು ಮಂತ್ರಿಸಿ ಮುಸ್ತಾಕ್ ಕೊಡುತ್ತಾನೆ. ಪ್ರವಾದಿ ಕುರಿತು ಪೋಸ್ಟಿಗೆ ಸಂಬಂಧಿಸಿದಂತೆ ಆತ ಪ್ರಚೋದನಾಕಾರಿ ಭಾಷಣ ಮಾಡಿದ್ದ.ಗುಂಪನ್ನು ಉದ್ದೇಶಿಸಿ ಮಾತನಾಡಿದ್ದ.
ಅಂದು ಠಾಣೆ ಮುಂದೆ ಪ್ರಚೋದನಾಕಾರಿ ಭಾಷಣ ಮಾಡಿದ್ದ. ಇದರಿಂದ ಉದ್ರಿಕ್ತರ ಗುಂಪು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿತ್ತು. ಕಲತೂರಾಟದ ವೇಳೆ 14ಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿತ್ತು. ಪ್ರಕರಣ ಸಂಬಂಧ ಸಾವಿರ ಜನರ ಮೇಲೆ ಪ್ರಕರಣ ದಾಖಲಾಗಿದೆ. ಇದುವರೆಗೂ ಪೊಲೀಸರು 20 ಜನರನ್ನು ಮಾತ್ರ ಬಂಧಿಸಿದ್ದಾರೆ. ಹಾಗಾಗಿ ಈ ಒಂದು ಪೊಲೀಸರ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.