ಚಿಕ್ಕಮಗಳೂರು : ರೈತರೊಬ್ಬರ ಬಳಿ ಜಮೀನಿನೊಂದರ ಹಳೇ ನಕ್ಷೆ ಸರಿಯಿಲ್ಲದ್ದರಿಂದ ಹೊಸ ನಕ್ಷೆ ತಯಾರಿಸಲು 4 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಪರವಾನಗಿ ಪಡೆದ ಸರ್ವೆಯರ್ ಹಾಗೂ ಜಿಪಂ ಕೆಡಿಪಿ ನಾಮನಿರ್ದೇಶಿತ ಸದಸ್ಯ ಅಶೋಕ್ ಅವರನ್ನು ಖಚಿತ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಲ್ಲೆಹಳ್ಳಿ ವೆಂಕಟೇಶ್ ಎಂಬವರು ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಹೌದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹುಲ್ಲೆ ಹಳ್ಳಿ ಗ್ರಾಮದ ವೆಂಕಟೇಶ್ ಜಮೀನಿನೊಂದರ ಹಳೇ ನಕ್ಷೆ ಸರಿಯಿಲ್ಲದ್ದರಿಂದ ಹೊಸ ನಕ್ಷೆ ತಯಾರಿಸಲು ಕಡೂರು ಎಡಿಎಲ್‍ಆರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಜಮೀನಿನ ಸರ್ವೆ ಮಾಡುವ ಸಮಯದಲ್ಲಿ ಅಶೋಕ್ ಅವರು ವೆಂಕಟೇಶ್ ಅವರ ಸಹೋದರನಿಂದ 1200 ಪಡೆದು ಕಡತ ತಯಾರಿಸಲು 5 ಸಾವಿರಕ್ಕೆ ಬೇಡಿಕೆಯಿಟ್ಟಿದ್ದರು. ಕಡೆಗೆ 4 ಸಾವಿರ ನೀಡಲು ಪೋನ್ ಮಾಡಿಲು ಒತ್ತಾಯಿಸಿದ್ದರು ಎನ್ನಲಾಗಿದೆ.
ಅದರಂತೆ ಸೋಮವಾರ ಸಂಜೆ ಅಶೋಕ್ ಅವರು 4 ಸಾವಿರ ರೂಪಾಯಿಗಳನ್ನು ಸರ್ವೆ ಇಲಾಖೆ ಕಚೇರಿಯಲ್ಲಿ ವೆಂಕಟೇಶ್ ಅವರಿಂದ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಇನ್‍ಪೆಕ್ಟರ್ ಅನಿಲ್ ರಾಥೋಡ್ ಹಾಗೂ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ.