ನವದೆಹಲಿ : ನಿರುದ್ಯೋಗಿ ಯುವ ಜನತೆಗೆ ಸಿಹಿ ಸುದ್ದಿ ಸಿಕ್ಕಿದ್ದು, ಪಿಎಂ ಇಂಟರ್ನ್ಶಿಪ್ ನೋಂದಣಿಗಳು ಪುನರಾರಂಭಗೊಂಡಿವೆ. 10ನೇ ತರಗತಿ, ಇಂಟರ್ ಮೀಡಿಯೇಟ್, ಐಟಿಐ ಮತ್ತು ಪದವಿ ವ್ಯಾಸಂಗ ಮಾಡಿದ 21 ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ಇದರ ಮೂಲಕ, ಅಗ್ರ 500 ಕಂಪನಿಗಳಲ್ಲಿ ಒಂದು ವರ್ಷದ ಇಂಟರ್ನ್ಶಿಪ್ ಸ್ಲಾಟ್ಗಳನ್ನ ನೀಡಲಾಗುವುದು. ಮಾಸಿಕ 5,000 ರೂ.ಗಳ ಸ್ಟೈಫಂಡ್ ಮತ್ತು 6,000 ರೂ.ಗಳ ಒಂದು ಬಾರಿಯ ಅನುದಾನವನ್ನ ನೀಡಲಾಗುವುದು. ಇಲ್ಲಿ ಕ್ಲಿಕ್ ಮಾಡಿ https://pminternship.mca.gov.in/login/ ಅರ್ಜಿ ಸಲ್ಲಿಸಿ.
ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯನ್ನು 2024-25ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಯಿತು. ಇದು ಯುವಕರ ಉದ್ಯೋಗ ಕೌಶಲ್ಯಗಳನ್ನ ಸುಧಾರಿಸುವ ಉದ್ದೇಶದಿಂದ 5 ವರ್ಷಗಳ ಅವಧಿಯಲ್ಲಿ ಉನ್ನತ ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್ಶಿಪ್ ಅವಕಾಶಗಳನ್ನ ಒದಗಿಸುವ ಗುರಿಯನ್ನ ಹೊಂದಿರುವ ಸಮಗ್ರ ಯೋಜನೆಯಾಗಿದೆ. ಈ ಯೋಜನೆಗೆ ಸೇರುವವರು ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪಿಎಂ ಸುರಕ್ಷಾ ಬಿಮಾ ಯೋಜನೆ ಮೂಲಕ ವಿಮಾ ರಕ್ಷಣೆಯನ್ನ ಪಡೆಯುತ್ತಾರೆ.