ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಕಾಲಿಗೆ ಜರಿ ಕಚ್ಚಿದ್ರೆ ಬಹಳಷ್ಟು ಜನ ಗಾಬರಿಯಾಗ್ತಾರೆ. ಆದ್ರೆ, ಆತಂಕ ಪಡುವ ಬದಲು ಮೊದಲು ಜರಿ ಕಚ್ಚಿದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಆದ್ರೆ, ಒಮ್ಮೊಮ್ಮೆ ಕಚ್ಚಿದ ತಕ್ಷಣ ನೀವು ವೈದ್ಯರ ಬಳಿಗೆ ಹೋಗಲು ಸಾಧ್ಯವಾಗೋದಿಲ್ಲ. ಆ ವೇಳೆಯಲ್ಲಿ ಏನು ಮಾಡಬೇಕು ಎನ್ನುವುದನ್ನ ತಿಳಿಯೋಣ ಬನ್ನಿ.
ಯಾರಿಗಾದರೂ ಕಾಲುಗಳಿಗೆ ಜರಿ ಕಚ್ಚಿದರೇ ತಕ್ಷಣ ಉಪ್ಪನ್ನು ನೀರಿನಲ್ಲಿ ಕರಗಿಸಿ ಮತ್ತು ಕಚ್ಚಿದ ಪ್ರದೇಶವನ್ನ ತೊಳೆಯಿರಿ. ಉಪ್ಪನ್ನು ಸೋಂಕು ನಿವಾರಕವಾಗಿ ಬಳಸಲಾಗುತ್ತದೆ ಮತ್ತು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನ ಮೃದುಗೊಳಿಸಿ, ಕಚ್ಚಿದ ಜಾಗಕ್ಕೆ ಹಚ್ಚಿ ನಂತ್ರ ಕಟ್ಟಿ. ಅದನ್ನು ಇಟ್ಟುಕೊಳ್ಳುವುದರಿಂದ ಅದರ ವಿಷತ್ವವನ್ನ ತಕ್ಷಣ ಕಡಿಮೆ ಮಾಡುತ್ತದೆ.
ಮತ್ತೊಂದು ವಿಧಾನವೆಂದರೆ ಮೆಣಸನ್ನ ನೀರಿನಲ್ಲಿ ಸೇರಿಸಿ ತಿನ್ನಬೇಕು. ಯಾಕಂದ್ರೆ, ಅದು ಅದರ ವಿಷತ್ವವನ್ನ ಕಡಿಮೆ ಮಾಡುತ್ತದೆ. ಇನ್ನು ಕೀಟ ಕಚ್ಚಿದ ತಕ್ಷಣ ನಾವು ಈ ಎಲ್ಲಾ ಕೆಲಸಗಳನ್ನ ಮಾಡಿದರೂ ವೈದ್ಯರನ್ನ ಸಂಪರ್ಕಿಸುವುದು ಸೂಕ್ತ.
ಕೆಲಸದ ಸ್ಥಳದಲ್ಲಿ ಹಿರಿಯರು ಬುದ್ಧಿವಾದ ಹೇಳುವುದು ಕ್ರಿಮಿನಲ್ ಅಪರಾಧವಲ್ಲ : ಸುಪ್ರೀಂ ಕೋರ್ಟ್
BREAKING: ನಾಳೆ ಬಿಜೆಪಿಯಿಂದ ದೆಹಲಿ ಮುಖ್ಯಮಂತ್ರಿ ಹೆಸರು ಘೋಷಣೆ: ವರದಿ | Delhi Chief Minister