ಚಾಮರಾಜನಗರ : ಚಾಮರಾಜನಗರದಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಿಯತಮೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು ಅಲ್ಲದೆ ಆಕೆಯ ಜೀವನವನ್ನು ದುರುಳನೊಬ್ಬ ನರಕ ಮಾಡಿದ್ದಾನೆ. ಪ್ರೀತಿ ಪ್ರೇಮದ ನೆಪದಲ್ಲಿ ದೈಹಿಕ ಸಂಪರ್ಕ ಮಾಡಿದ್ದಲ್ಲದೆ 3 ಬಾರಿ ಗರ್ಭಪಾತ ಮಾಡಿಸಿದ್ದಾನೆ. ಪ್ರಿಯಕರನ ವಂಚನೆಗೆ ಸದ್ಯ ಯುವತಿ ಮತ್ತು ಸಂಬಂಧಿಕರು ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಹೌದು 2021 ರಲ್ಲಿ ನರ್ಸಿಂಗ್ ಕೋರ್ಸ್ ಮಾಡುವಾಗ ಯುವತಿಗೆ ಯುವಕ ಕ್ಲಿಂಟನ್ ಪರಿಚಯನಾಗಿದ್ದಾನೆ. ಕ್ಲಿಂಟನ್ ಎಂಬಾತನ ಸ್ನೇಹ ಬೆಳೆಸಿದ್ದ ಜಾನ್ ಪ್ರೆಸಿಲ್ಲಾ ಎಂಬ ಯುವತಿ, ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಸುತ್ತಾಡಿದ್ದಾರೆ. ಮನೆಯವರಿಗೆ ಇವರ ವಿಷಯ ಗೊತ್ತಾಗಿ ಪೋಷಕರು ಮದುವೆಗೆ ಮುಂದಾಗಿದ್ದರು. ಆದರೆ ಕ್ಲಿಂಟನ್ ಸಹೋದರಿಗೆ ಈ ಮದುವೆ ಒಪ್ಪಿಗೆ ಇರಲಿಲ್ಲ ಹೀಗಾಗಿ ಪ್ರೆಸಿಲ್ಲಾಗೆ ಆಕೆಯ ಪೋಷಕರು ಬೇರೆ ಮದುವೆ ಮಾಡಿಸಿದ್ದಾರೆ.
2022ರಲ್ಲಿ ಪ್ರೆಸಿಲ್ಲಾ ಜೊತೆಗೆ ಪೋಷಕರು ಬೇರೆ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯಾಗಿದ್ದು ಗೊತ್ತಾಗುತ್ತಿದ್ದಂತೆ ಕ್ಲಿಂಟನ್ ಆಕೆಗೆ ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದಾನೆ. ಪತಿ ಸ್ಟೀಫನ್ ರಾಜ್ ಗೂ ಪ್ರೆಸಿಲ್ಲಾ ಫೋಟೋ ಕಳಿಸಿ ಟಾರ್ಚರ್ ನೀಡಿದ್ದಾನೆ. ವಿಚಾರ ಗೊತ್ತಾಗಿ ಸ್ಟೀಫನ್ ರಾಜ್ ಮನೆಯಿಂದ ಪ್ರೆಸಿಲ್ಲಾಳನ್ನು ಆಚೆ ಹಾಕಿದ್ದಾನೆ. ಬಳಿಕ ನಾನು ನಿನ್ನ ಮದುವೆಯಾಗುತ್ತೇನೆ ಎಂದು ಕ್ಲಿಂಟನ್ ಕರೆದಿದ್ದಾನೆ.ನಂತರ 10 ತಿಂಗಳು ಪ್ರೆಸಿಲ್ಲಾ ಜೊತೆಗೆ ಕ್ಲಿಂಟನ್ ಸಂಸಾರ ನಡೆಸಿದ್ದಾನೆ. ಲೈಂಗಿಕ ಸಂಪರ್ಕ ಬೆಳೆಸಿ ಬಳಿಕ ಮೂರು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.