ಉತ್ತರಪ್ರದೇಶ : ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ಪವಿತ್ರ ಸ್ಥಾನಕ್ಕೆ ಎಂದು ತೆರಳುತ್ತಿದ್ದ ವೇಳೆ ಇದೀಗ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಬೊಲೆರೋ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತದಲ್ಲಿ 10 ಜನ ಸಾವನ್ನಪ್ಪಿದ್ದು 19 ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮಿರ್ಜಾಪುರ ಮತ್ತು ಪ್ರಯಾಗ್ ರಾಜ್ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ.
ಕುಂಭ ಮೇಳಕ್ಕೆ ಎಂದು ಪವಿತ್ರ ಸ್ನಾನ ಮಾಡಲು, ತೆರಳುವ ವೇಳೆ ಮಿರ್ಜಾಪುರ ಪ್ರಯಾಗ್ರಾಜ್ ಹೆದ್ದಾರಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದೆ. ಬೋಲೇರೋ ವಾಹನ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿ 10 ಜನ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕುಂಭಮೇಳಕ್ಕೆ ತರುಳುವಾಗತೆರಳುವಾಗ ಈ ಭೀಕರವಾದ ಅಪಘಾತವಾಗಿ 10 ಜನ ದುರ್ಮರಣ ಹೊಂದಿದ್ದಾರೆ.
ಮೃತರನ್ನು ಛತ್ತಿಸ್ಗಢ ಕೊರ್ಬಾ ಜಿಲ್ಲೆಯ 10 ಜನರು ಸಾವನ್ನಪ್ಪಿದ್ದಾರೆ. ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಬರುವಾಗ ಈ ಒಂದು ಘೋರವಾದ ದುರಂತ ಸಂಭವಿಸಿದೆ. ಘಟನೆಯಲ್ಲಿ 19 ಜನರಿಗೆ ಗಂಭೀರವಾದ ಗಾಯಗಳಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.