ಬೆಂಗಳೂರು : ಬೆಂಗಳೂರಿನಲ್ಲಿ ವಿಪರೀತವಾಗಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ, ಇತ್ತೀಚಿಗೆ ಅಂತೂ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದೀಗ ಬೀದಿನಾಯಿಗಳಿಗೆ ರೋಗಗಳು ಹರಡದಂತೆ ಕ್ರಮವಹಿಸೋಕೆ ಹೊರಟಿರೋ ಪಾಲಿಕೆ ಬರೋಬ್ಬರಿ 4.98 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಬೈನ್ಡ್ ವ್ಯಾಕ್ಸಿನ್ ಕೊಡಿಸೋಕೆ ಹೊರಟಿದೆ.
ಹೌದು ಬೆಂಗಳೂರು ಮಹಾನಗರ ಪಾಲಿಕೆ ಬೀದಿನಾಯಿಗಳಿಗೆ ಸಂಯೋಜಿತ ಲಸಿಕೆ ಅಭಿಯಾನ ಆರಂಭಿಸಿದೆ. 4.98 ಕೋಟಿ ರೂ. ವೆಚ್ಚದ ಈ ಯೋಜನೆಯು ರೇಬೀಸ್ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಗುರಿ ಹೊಂದಿದೆ. ನಿನ್ನೆ ಈ ಒಂದು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸದ್ಯ ಪಾಲಿಕೆ ವ್ಯಾಪ್ತಿಯ ಬೀದಿನಾಯಿಗಳಿಗೆ ಊಟ ನೀಡುವ ಕೆಲಸ ಶುರುಮಾಡಿರುವ ಪಾಲಿಕೆ ಇದೀಗ ಬೀದಿನಾಯಿಗಳಿಗೆ ರೋಗ ಹರಡದಂತೆ ನಿಗಾ ಇಡುವುದಕ್ಕೆ ಹೊರಟಿದೆ. ಸದ್ಯ ಬಿಬಿಎಂಪಿಯ ಈ ಹೊಸ ಯೋಜನೆಗೆ ಇಂದು ಚಾಲನೆ ನೀಡಿರುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈ ಪ್ಲಾನ್ ನಿಂದ ನಾಯಿಗಳಿಗೆ ಹರಡುವ ರೋಗ ಹಾಗೂ ನಾಯಿಗಳಿಂದ ಮನುಷ್ಯರಿಗೆ ಹರಡುವ ರೋಗಗಳಿಗೆ ಈ ಲಸಿಕೆ ಬ್ರೇಕ್ ಹಾಕಲಿದೆ ಅಂದಿದ್ದಾರೆ.