Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು ಘೋರ ದುರಂತ : 6 ಮಂದಿ ಸ್ಥಳದಲ್ಲೇ ಸಾವು.!

21/05/2025 7:30 AM

ಉದ್ಯೋಗವಾರ್ತೆ : `CISF’ ನಲ್ಲಿ ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | CISF Recruitment-2025

21/05/2025 7:26 AM

BREAKING: ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 6 ಸಾವು, 6 ಮಂದಿಗೆ ಗಾಯ | Building collapse

21/05/2025 7:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬಂಜಾರ ಸಮುದಾಯದ ಅಭಿವೃದ್ದಿಗೆ ಕ್ರಮ : ರಾಜ್ಯದಲ್ಲಿ 1500 ಬಂಜಾರ ಭವನ ನಿರ್ಮಾಣ, 1 ರಿಂದ ಪಿಯುಸಿ ವರೆಗೆ ವಸತಿ ಶಾಲೆ ಪ್ರಾರಂಭ
KARNATAKA

BIG NEWS : ಬಂಜಾರ ಸಮುದಾಯದ ಅಭಿವೃದ್ದಿಗೆ ಕ್ರಮ : ರಾಜ್ಯದಲ್ಲಿ 1500 ಬಂಜಾರ ಭವನ ನಿರ್ಮಾಣ, 1 ರಿಂದ ಪಿಯುಸಿ ವರೆಗೆ ವಸತಿ ಶಾಲೆ ಪ್ರಾರಂಭ

By kannadanewsnow5715/02/2025 5:45 AM

ದಾವಣಗೆರೆ : ಶ್ರಮಜೀವಿ ಬಂಜಾರ ಸಮುದಾಯದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಭಾಯಾಗಡ್ ನಲ್ಲಿ ಬರುವ ಶೈಕ್ಷಣಿಕ ಸಾಲಿನಿಂದ ವಸತಿ ಶಾಲೆ ಪ್ರಾರಂಭಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವರಾದ ಡಾ: ಹೆಚ್.ಸಿ.ಮಹದೇವಪ್ಪ ಹೇಳಿದರು.

ಅವರು ಶುಕ್ರವಾರ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್ ನಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಂಡಾ ಅಭಿವೃದ್ದಿ ನಿಗಮದಿಂದ ಏರ್ಪಡಿಸಲಾದ ಸಂತ ಸೇವಾಲಾಲ್ ರವರ 286 ನೇ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಂಜಾರ ಸಮುದಾಯ ಶ್ರಮಪಡುವವರಾಗಿದ್ದು ಉದ್ಯೋಗ ಅರಿಸಿ ವಲಸೆ ಹೋಗುವುದೇ ಹೆಚ್ಚು, ಇದರಿಂದ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವರು. ಈ ಹಿನ್ನಲೆಯಲ್ಲಿ ಸೂರಗೊಂಡನಕೊಪ್ಪದಲ್ಲಿ ಒಂದರಿಂದ ಪಿಯುಸಿ ವರೆಗೆ ವಸತಿಯುತ ಶಾಲೆ ಆರಂಭಿಸಲು ಮನವಿ ಮಾಡಿದ್ದು ಇದನ್ನು 2025-26 ನೇ ಸಾಲಿನ ಬಜೆಟ್ ನಲ್ಲಿ ಅನುಮೋದನೆ ಪಡೆದು ಪ್ರಾರಂಭಿಸಲಾಗುತ್ತದೆ, ಇದಕ್ಕಾಗಿ ರೂ.40 ಕೋಟಿ ವರೆಗೆ ಅನುದಾನ ವೆಚ್ಚ ಮಾಡಲಾಗುತ್ತದೆ ಎಂದರು.

ಸಂತ ಸೇವಾಲಾಲ್ ರವರು ನೀತಿವಂತರು, ತತ್ವ ಸಿದ್ಧಾಂತಗಳ ಪ್ರತಿಪಾದಕರಾಗಿದ್ದವರು. ಇವರ ಆರಾಧನೆಗಾಗಿ ರಾಜ್ಯಾದಲ್ಲಿ ಇಲಾಖೆಯಿಂದ 1500 ಕ್ಕೂ ಹೆಚ್ಚು ಬಂಜಾರಭವನಗಳ ನಿರ್ಮಾಣ ಮಾಡಲಾಗಿದೆ ಎಂದರು.

ಸಂತ ಸೇವಾಲಾಲ್ ಜನ್ಮಸ್ಥಳವನ್ನು ಅಭಿವೃದ್ದಿ ಮಾಡಲು ಟ್ರಸ್ಟ್ ಮಾಡಲಾಗಿದ್ದು ಈ ವರ್ಷ ಇದಕ್ಕೆ ಅನುದಾನ ಒದಗಿಸಲಾಗುತ್ತದೆ.
ಸಮುದಾಯವನ್ನು ಎಲ್ಲಾ ಹಂತದಲ್ಲಿ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದ್ದು ಎಲ್ಲಾ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ ಸಂತ ಸೇವಾಲಾಲ್ ಜನ್ಮಸ್ಥಳ ಇನ್ನಷ್ಟು ಅಭಿವೃದ್ದಿಯಾಗಬೇಕಾಗಿದೆ. ಜೋಗದಿಂದ ಚಿಗಳಿಕಟ್ಟೆವರೆಗೆ ದ್ವಿಪಥ ರಸ್ತೆಯನ್ನು ಅಭಿವೃದ್ದಿಪಡಿಸಲು ಮನವಿ ಮಾಡಿದ್ದು ಬಜೆಟ್ ನಲ್ಲಿ ಅನುಮೋದನೆ ನೀಡಲಾಗುತ್ತದೆ ಎಂದರು.

ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಸರ್ಕಾರದ ಕೆಲಸವಾಗಿದೆ. ಜನರು ಸಂಘಟಿತರಾಗಲು ಶಿಕ್ಷಣವೊಂದೇ ದಾರಿದೀಪವಾಗಿದೆ. ಇಂದು ಶೋಷಿತ ಸಮಾಜಗಳು ಮುಂದೆ ಬಂದಿವೆ ಎಂದರೆ, ಅದಕ್ಕೆ ಸಂವಿಧಾನದಿಂದ ಬೆಳೆಯಲು ಸಾಧ್ಯವಾಗಿದ್ದು ಸಂವಿಧಾನ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ವಿಧಾನಸಭಾ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿಯವರು ಪ್ರಾಸ್ತಾವಿಕವಾಗಿ ಮಾತನಾಡಿ 2013 ರಿಂದ ಮಹಾಮಠ ಸಮಿತಿ ರಚನೆ ಮಾಡಿ ವಿವಿಧ ಅಭಿವೃದ್ದಿ ಕೆಲಸ ಮಾಡಲಾಗಿದೆ. ಮಠವನ್ನು ಇನ್ನು ಅಭಿವೃದ್ದಿ ಮಾಡಬೇಕಾಗಿದೆ. ಸಮುದಾಯದವರು ಕೆಲಸಕ್ಕಾಗಿ ವಲಸೆ ಹೋಗುವುದು ಸಾಮಾನ್ಯವಾಗಿದೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲು ಪಿಯುಸಿವರೆಗೆ ವಸತಿ ಶಾಲೆ ಆರಂಭಿಸಬೇಕು ಮತ್ತು ಸಂಪರ್ಕ ರಸ್ತೆ ಅಭಿವೃದ್ದಿಪಡಿಸಬೇಕೆಂದ ಅವರು ಆಡಿ, ಹಟ್ಟಿ, ತಾಂಡಗಳಲ್ಲಿನ ನಿವಾಸಿಗಳಿಗೂ ಇ-ಸ್ವತ್ತು ಸಿಗುವಂತೆ ಮಾಡಬೇಕೆಂದರು.

ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲಸಂರಕ್ಷಣಾ ಸಚಿವ ಸಂಜಯ್ ಡಿ.ರಾಥೋಡ್, ಶಾಸಕರಾದ ಬಿ.ವೈ.ವಿಜಯೇಂದ್ರ, ಶಾಸಕರಾದ ಡಾ.ಚಂದ್ರು ಕೆ.ಲಮಾಣಿ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ್ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಯದೇವ ನಾಯ್ಕ್,ಮಾಜಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಪಿ.ರಾಜೀವ್, ಕೆ.ಶಿವಮೂರ್ತಿನಾಯ್ಕ್, ಬಸವರಾಜ್ ನಾಯ್ಕ್, ಜಲಜಾನಾಯ್ಕ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುರೇಶ್ ಬಿ.ಇಟ್ನಾಳ್ ಹಾಗೂ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸ್ವಾಗತಿಸಿದರು.

BIG NEWS: Steps taken for the development of Banjara community: Construction of 1500 Banjara Bhavans in the state starting of residential schools from 1st to PUC
Share. Facebook Twitter LinkedIn WhatsApp Email

Related Posts

ಉದ್ಯೋಗವಾರ್ತೆ : `CISF’ ನಲ್ಲಿ ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | CISF Recruitment-2025

21/05/2025 7:26 AM2 Mins Read

ರಾಜ್ಯ ಸರ್ಕಾರದಿಂದ ‘ಪರಿಶಿಷ್ಟ ಜಾತಿ ಒಳ ಮೀಸಲಾತಿ’ ಸಮೀಕ್ಷೆ: ಆನ್‌ಲೈನ್ ಮೂಲಕ ಸ್ವಯಂಘೋಷಣೆಗೆ ಅವಕಾಶ

21/05/2025 7:04 AM1 Min Read

ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ : ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆರೋಪ

21/05/2025 7:02 AM1 Min Read
Recent News

BREAKING : ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು ಘೋರ ದುರಂತ : 6 ಮಂದಿ ಸ್ಥಳದಲ್ಲೇ ಸಾವು.!

21/05/2025 7:30 AM

ಉದ್ಯೋಗವಾರ್ತೆ : `CISF’ ನಲ್ಲಿ ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | CISF Recruitment-2025

21/05/2025 7:26 AM

BREAKING: ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 6 ಸಾವು, 6 ಮಂದಿಗೆ ಗಾಯ | Building collapse

21/05/2025 7:15 AM

ಎಂ.ಎಸ್. ಧೋನಿ ಪಾದ ಮುಟ್ಟಿ ನಮಸ್ಕರಿಸಿದ `ವೈಭವ್ ಸೂರ್ಯವಂಶಿ’ : ವಿಡಿಯೋ ವೈರಲ್ | Watch VIdeo

21/05/2025 7:12 AM
State News
KARNATAKA

ಉದ್ಯೋಗವಾರ್ತೆ : `CISF’ ನಲ್ಲಿ ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | CISF Recruitment-2025

By kannadanewsnow5721/05/2025 7:26 AM KARNATAKA 2 Mins Read

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಭರ್ಜರಿ ಸಿಹಿಸುದ್ದಿ ನೀಡಿದ್ದು, ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ…

ರಾಜ್ಯ ಸರ್ಕಾರದಿಂದ ‘ಪರಿಶಿಷ್ಟ ಜಾತಿ ಒಳ ಮೀಸಲಾತಿ’ ಸಮೀಕ್ಷೆ: ಆನ್‌ಲೈನ್ ಮೂಲಕ ಸ್ವಯಂಘೋಷಣೆಗೆ ಅವಕಾಶ

21/05/2025 7:04 AM

ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ : ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆರೋಪ

21/05/2025 7:02 AM

BREAKING: ಮೇ.23ರಂದು ಬೆಂಗಳೂರಲ್ಲಿ ನಡೆಯಬೇಕಿದ್ದ IPL ಪಂದ್ಯ ಲಖನೌಗೆ ಶಿಫ್ಟ್ | IPL Match 2025

21/05/2025 7:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.