ವಿಜಯಪುರ : ಜಿಲ್ಲೆಯ ಭೀಮಾತೀರದಲ್ಲಿ ನಡೆದ್ದಂತ ಬಾಗಪ್ಪ ಹರಿಜನ ಹತ್ಯೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ್ನು ಬಂಧಿಸಲಾಗಿತ್ತು. ಇದೀಗ ನಾಲ್ವರು ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ವಿಜಯಪುರ 2ನೇ ಹೆಚ್ಚುವರಿ ಸೇಷನ್ಸ್ ನ್ಯಾಯಾಲಯ ಆದೇಶಿಸಿದೆ.
ಕಳೆದ 2 ದಿನಗಳ ಹಿಂದೆ ವಿಜಯಪುರ ನಗರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ನನ್ನು ಭೀಕರವಾಗಿ ಕೊಲೆಗಯ್ಯಲಾಗಿತ್ತು. ಈ ಹತ್ಯೆ ಸಂಬಂಧ ಪೊಲೀಸರು ಆರೋಪಿ ಪಿಂಟ್ಯಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
ವಿಜಯಪುರದ ಗಾಂಧಿಚೌಕ್ ನ ಪೊಲೀಸರು ಪಿಂಟ್ಯಾ ಸೇರಿದಂತೆ ನಾಲ್ವರು ಅರೋಪಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನ ಪ್ರಕಾಶ್ ಅಲಿಯಾಸ್ ಪಿಂಟ್ಯಾ ಅಗರಖೇಡ್ (25), ರಾಹುಲ್ ತಳಕೇರಿ (20), ಗದಿಗೆಪ್ಪ ಅಲಿಯಾಸ್ ಮನಿಕಂಠ ದನಕೊಪ್ಪ (27), ಎ4 ಸುದೀಪ್ ಕಾಂಬಳೆ (23) ಎಂದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದರು.
ಬಂಧಿತ ಆರೋಪಿಗಳನ್ನು ವಿಜಯಪುರದ 2ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಅಲ್ಲದೇ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು. ಈ ಮನವಿ ಪುರಸ್ಕರಿಸಿದಂತ ಕೋರ್ಟ್, ನಾಲ್ವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.