ಬೆಂಗಳೂರು : ಈಗಾಗಲೇ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ ಬೆನ್ನೆಲೆ ಬೆಂಗಳೂರಿನ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಜನರಿಗೆ ಇದೀಗ ಮತ್ತೊಂದು ಶಾಕ್ ಬಿಸಿ ತಟ್ಟಲಿದೆ. ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳಕ್ಕೆ ಬೆಸ್ಕಾಂ ಇದೀಗ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ವಿದ್ಯುತ್ ದರ ಏರಿಕೆ ಪಕ್ಕ ಎನ್ನಲಾಗುತ್ತಿದೆ ವಿದುದ್ದರ ಏರಿಕೆಗೆ ಬೆಸ್ಕಾಂನಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದು ಫೆಬ್ರವರಿ 17ರಂದು ಸಾರ್ವಜನಿಕರ ಆಕ್ಷೇಪಣೆ ಸ್ವೀಕಾರ ಮಾಡಲಿದ್ದು ನಂತರದಲ್ಲಿ ಪರಿಶೀಲಿಸಿ ದರ ಏರಿಕೆಗೆ ನಿರ್ಧಾರ ಮಾಡಲಿದೆ ಈಗಾಗಲೇ ದರ ಹೆಚ್ಚಳಕ್ಕೆ ಬೆಸ್ಕಾಂನಿಂದ ಪ್ರಸ್ತಾಪ ಸಲ್ಲಿಸಿದ್ದು ಮುಂದಿನ ಮೂರು ವರ್ಷಗಳಿಗೆ ಅನ್ವಯ ಆಗುವಂತೆ ಪ್ರಸ್ತಾಪಿಸಲಿಕ್ಕೆ ಆಗಿದೆ
ಇನ್ನು ಬೆಸ್ಕಾಂ ಪ್ರಸ್ತಾವನೆಗೆ ಕೈಗಾರಿಕೋದ್ಯಮಿಗಳು ಕಿಡಿ ಕಾರುತ್ತಿದ್ದಾರೆ. ರೆವೆನ್ಯೂ ಹೆಚ್ಚಳ ಮಾಡುವ ಉದ್ದೇಶ ಇದರಲ್ಲಿ ಇದೆ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕೈಗಾರಿಕೋದ್ಯಮಿಗಳು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ವಾಣಿಜ್ಯ ಬಳಕೆದಾರರಿಂದಲೂ ಕೂಡ ಬೆಸ್ಕಾಂ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ದರ ಏರಿಕೆ ಪ್ರಸ್ತಾಪ
2025-26ನೇ ವರ್ಷಕ್ಕೆ 67 ಪೈಸೆ ಪರ್ ಯೂನಿಟ್, 2026-27ನೇ ವರ್ಷಕ್ಕೆ 75 ಯೂನಿಟ್ ಹಾಗೂ 2027-28ನೇ ವರ್ಷಕ್ಕೆ 91 ಪೈಸೆ ಪರ್ ಯೂನಿಟ್ ದರ ಏರಿಕೆ ಪ್ರಸ್ತಾವನೆ ಬೆಸ್ಕಾಂ ಮುಂದೆ ಇದೆ.