ಬೆಂಗಳೂರು: ಬೊಮ್ಮನಹಳ್ಳಿ ವಲಯದ ಸಾರಕ್ಕಿ ಕೆರೆ ಪ್ರದೇಶದ 21.68 ಗುಂಟೆ ಒತ್ತುವರಿಯಾಗಿದ್ದ ಪ್ರದೇಶವನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ವಶದಲ್ಲಿರುವ ಕೆರೆಗಳ ಒತ್ತುವರಿ ತೆರವಿಗೆ ಒತ್ತುವರಿ ಸರ್ವೆ ಹಾಗೂ ತೆರವುಗೊಳಿಸುವ ಕಾರ್ಯಜಾರಿಯಲ್ಲಿರುತ್ತದೆ.
ಅದರಂತೆ ಇತ್ತೀಚೆಗೆ ಬೊಮ್ಮನಹಳ್ಳಿ ವಲಯದ ಸಾರಕ್ಕಿ ಕೆರೆ (ಜರಗನಹಳ್ಳಿ ಸರ್ವೆ 7) ರ ಕೆರೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕೆರೆಯ ಸರ್ವೆ ಕಾರ್ಯ ನಡೆಸಿ 21.68 ಗುಂಟೆ ಶೆಡ್ ಖಾಲಿ ಜಾಗ ಹಾಗೂ ರಸ್ತೆಯಿಂದ ಆಕ್ರಮಿತವಾಗಿದ್ದ ಪ್ರದೇಶವು ಒತ್ತುವರಿಯಾಗಿರುವುದಾಗಿ ತಿಳಿಸಿರುತ್ತಾರೆ.
ಮುಂದುವರಿದು, ಕೆರೆಗಳು ವಿಭಾಗದ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ರವರುಗಳು 21.68 ಗುಂಟೆ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸಿ ಈ ಪ್ರದೇಶಕ್ಕೆ ತಂತಿ ಬೇಲಿಯನ್ನು ಅಳವಡಿಸಲಾಗಿರುತ್ತದೆ. ಈ ಒತ್ತುವರಿ ಪ್ರದೇಶದ ಮಾರುಕಟ್ಟೆ ಮೌಲ್ಯವು ಸುಮಾರು 20 ಕೋಟಿಗಳಾಗಿರುತ್ತದೆಂದು ತಿಳಿದುಬಂದಿರುತ್ತದೆ.
ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಈ ಹೊಸ ಮಾರ್ಗದಲ್ಲಿ BMTC ಬಸ್ ಸಂಚಾರ ಆರಂಭ
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಿತ್ತು ಅಂಕುಶ: ಹೀಗಿದೆ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯ ಹೈಲೈಟ್ಸ್
BIG NEWS: ಸೊರಬದ ಕಂತನಹಳ್ಳಿಯಲ್ಲಿ ಮರಗಳ ಮಾರಣಹೋಮ: ತನಿಖಾ ವರದಿ ಸಿದ್ಧ, ತಪ್ಪಿತಸ್ಥರ ವಿರುದ್ಧ ಕ್ರಮ ಫಿಕ್ಸ್