ಉತ್ತರಪ್ರದೇಶ : ಎಲ್ಲರೂ ಮದುವೆ ಸಂಭ್ರಮದಲ್ಲಿ ಇರುವಾಗಲೇ ಮದುವೆ ಚೌಟ್ರಿಗೇ ಏಕಾಏಕಿ ಚಿರತೆಯೊಂದು ನುಗ್ಗಿದೆ. ಇದರಿಂದ ಸಹಜವಾಗಿ ಭೀತಿಗೆ ಒಳಗಾಗಿದ್ದ ಮದುವೆ ಬಂದಿದ್ದ ಜನ ಚಿರತೆಯನ್ನು ಕಂಡು ಹೌಹಾರಿದ್ದಾರೆ. ಈ ಒಂದು ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ.
ಹೌದು ಮದುವೆ ಮನೆಗೆ ಏಕಾಏಕಿ ಚಿರತೆ ನುಗ್ಗಿದರೆ ಯಾರಿಗೆ ತಾನೇ ಭಯ ಆಗಲ್ಲ? ಮದುವೆ ಚೌಟ್ರಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜೀವ ಭಯದಿಂದ ಜನರು ಮದುವೆ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಜನರಿಗೆ ಚಿರತೆ ದಾಳಿ ಭೀತಿ ತಂದಿದೆ.
ಕೂಡಲೇ ಅರಣ್ಯ ಇಲಾಖೆ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಮಧುಮಗಳನ್ನು ಸಂಬಂಧಿಕರು ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿದೆ. ದಾಳಿ ಸಂದರ್ಭದಲ್ಲಿ ಚಿರತೆ ಗನ್ ಕಸಿದುಕೊಂಡಿದೆ ಕೊನೆಗೂ ಅರಣ್ಯ ಇರಲ್ಲ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿದಿದ್ದಾರೆ.