ಉತ್ತರಕನ್ನಡ : ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿತ ಆಗಿದ್ದು, ಭೂ ಕುಸಿತದಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸ್ಫೋಟದ ಸದ್ದು ಕೇಳಿ ಬಂದಿದೆ. ಅಂಕೋಲ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಭೂ ಕುಸಿತದಿಂದ ಗುಡ್ಡ ಕುಸಿದಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಗುಡ್ಡ ಕುಸಿತ ಪರಿಣಾಮ ತೋಟದಲ್ಲಿ ದೊಡ್ಡ ದೊಡ್ಡ ಪ್ರಮಾಣದ ಬಂಡೆಕಲ್ಲು ಮಣ್ಣು ಬಿದ್ದಿವೆ. ಕಳೆದ ಎರಡು ತಿಂಗಳ ಹಿಂದೆ ಇದೇ ಭಾಗದ ಸುತ್ತಲೂ ಭೂಮಿ ಕಂಪಿಸಿತ್ತು. ಘಟನಾ ಸ್ಥಳಕ್ಕೆ ತಜ್ಞರ ತಂಡ ಭೇಟಿ ನೀಡಿ ಭೂಕಂಪನ ಬಗ್ಗೆ ದೃಢೀಕರಿಸಿದ್ದರು.
ಈ ಹಿಂದೆ ಯಲ್ಲಾಪುರ ಭಾಗದ ಕಳಚಿಯಲ್ಲಿ ಕೂಡ ಭೂಮಿ ಕುಸಿದಿತ್ತು. ಜಿಎಸ್ಐ ತಜ್ಞರ ವರದಿ ಪ್ರಕಾರ ಜಿಲ್ಲೆಯಲ್ಲಿ 439 ಭೂಕುಸಿತ ವಲಯಗಳಿವೆ ಎಂದು ತಿಳಿದುಬಂದಿದೆ. ಮಳೆ ನಿಂತರು ಕೂಡ ಭೂ ಕುಸಿತ ನಿಲ್ಲುತ್ತಿಲ್ಲ ಎಂದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.