ನವದೆಹಲಿ : RCB ತಂಡಕ್ಕೆ ಯಂಗ್ ಸ್ಟರ್ ರಜತ್ ಪಾಟೀದಾರ್ ಅವರನ್ನು ನೂತನ ನಾಯಕನಾಗಿ ಇದೀಗ ಫ್ರಾಂಚೈಸಿ ಆಯ್ಕೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಒಂದು ಆಯ್ಕೆ ಪ್ರಕ್ರಿಯೆಯಲ್ಲಿ ವಿರಾಟ್ ಕೊಹ್ಲಿ ಅವರ ಹೆಸರು ಕೂಡ ಮುಂಚೂಣಿಯಲ್ಲಿತ್ತು. ಇದೀಗ ರಜತ್ ಪಟ್ಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಡೂ ಪ್ಲೇಸಿಸ್ ರಿಂದ ತರವಾಗಿದ ಸ್ಥಾನಕ್ಕೆ ರಜತ್ ಪಾಟೀದಾರ್ ಅವರು ನೇಮಕವಾಗಿದ್ದಾರೆ.ಆರ್ ಸಿ ಬಿ ತಂಡದ ನೂತನ ಕ್ಯಾಪ್ಟನ್ ಆಗಿ ರಜತ್ ಪಾಟೀದಾರ್ ಆಯ್ಕೆಯಾಗಿದ್ದಾರೆ. ಆರ್ ಸಿ ಬಿ ತಂಡವನ್ನು ರಜತ ಪಾಟೀದಾರ್ ಮುನ್ನಡೆಸಲಿದ್ದಾರೆ. ನೂತನ ಕ್ಯಾಪ್ಟನ್ ಆಗಿ ರಜತ್ ಪಾಟೀಲ್ ನೇಮಕವಾಗಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ. ತಂಡದ ಭವಿಷ್ಯ, ಹಿತದೃಷ್ಟಿಯಿಂದಾಗಿ ರಜತ್ ಪಾಟೀದಾರ್ ಅವರಿಗೆ ನಾಯಕ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಬಹುನಿರೀಕ್ಷಿತ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೂ ಮುಂಚಿವಾಗಿ ಆರ್‌ಸಿಬಿ ಈ ಕುರಿತು ನಿರ್ಧಾರ ಪ್ರಕಟಿಸಿದೆ.ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಕಪ್ತಾನಗಿರಿ ವಹಿಸಿಕೊಳ್ಳುವ ಕುರಿತು ವರದಿಗಳು ಬಂದಿದ್ದವು. ಆದರೆ ಕೊನೆಗೂ ರಜತ್ ಪಾಟೀದಾರ್ ಅವರಿಗೆ ನಾಯಕತ್ವ ವಹಿಸಿಕೊಡಲು ತಂಡದ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.
2013ರಿಂದ 2021ರವರೆಗೆ ಆರ್‌ಸಿಬಿ ತಂಡವನ್ನು ಕೊಹ್ಲಿ ಮುನ್ನಡೆಸಿದ್ದರು. 2022ರಿಂದ 2024ರವರೆಗೆ ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸಿ ತಂಡದ ಸಾರಥ್ಯ ವಹಿಸಿದ್ದರು. ಇದೀಗ ಅಚ್ಚರಿಯ ಪ್ರೀತಿ ಬೆಳವಣಿಗೆಯಲ್ಲಿ ವಿರಾಟ್ ಕೊಹ್ಲಿ ಅವರ ಬದಲಾಗಿ ಯಂಗ್ ಸ್ಟರ್ ರಜತ್ ಪಾಟೀದಾರ್ ಅವರಿಗೆ ನಾಯಕನ ಜವಾಬ್ದಾರಿ ವಹಿಸಲಾಗಿದೆ.